HomeLatest Newsರಾಷ್ಟ್ರಧ್ವಜದ ಜತೆ ಮೈದಾನದಲ್ಲೇ ಪ್ರೇಯಸಿಗೆ ಕಿಸ್, ಅನಗತ್ಯ ಅಪ್ಪುಗೆ: ಪಾಂಡ್ಯ ವರ್ತನೆ ಕಂಡು ಎಷ್ಟು ಡ್ರಾಮಾ,...

ರಾಷ್ಟ್ರಧ್ವಜದ ಜತೆ ಮೈದಾನದಲ್ಲೇ ಪ್ರೇಯಸಿಗೆ ಕಿಸ್, ಅನಗತ್ಯ ಅಪ್ಪುಗೆ: ಪಾಂಡ್ಯ ವರ್ತನೆ ಕಂಡು ಎಷ್ಟು ಡ್ರಾಮಾ, ಈ ಶೋಕಿ ಬೇಕಾ ಎಂದು ಕಿಡಿಕಾರಿದ ಜನ; ವಿಡಿಯೊ

ನಿನ್ನೆ ( ಮಾರ್ಚ್ 8 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಯಿತು.

ಈ ಮೂಲಕ ಮೂರನೇ ಬಾರಿಗೆ ಟಿ20 ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆದ ಭಾರತ ತಂಡದ ಆಟಗಾರರು ಪಂದ್ಯ ಮುಗಿಯುತ್ತಿದ್ದಂತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಆರಂಭಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಧ್ವಜವನ್ನು ಹೆಗಲ ಮೇಲೆ ಹಾಕಿಕೊಂಡು ವಿವಿಧ ಹಾಡುಗಳಿಗೆ ಡಾನ್ಸ್ ಮಾಡಿದರು. ಈ ಪೈಕಿ ಹಾರ್ದಿಕ್ ಪಾಂಡ್ಯ ಸಂಭ್ರಮಾಚರಣೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಂಡ್ಯನದ್ದು ಅತಿರೇಕದ ವರ್ತನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಹೌದು, ಹಾರ್ದಿಕ್ ಪಾಂಡ್ಯ ತನ್ನ ಮತ್ತೋರ್ವ ಪ್ರೇಯಸಿ ಮಹಿಕಾ ಶರ್ಮಾಳನ್ನು ಪಂದ್ಯದ ಬಳಿಕ ಮೈದಾನಕ್ಕೆ ಕರೆತಂದು ರಾಷ್ಟ್ರಧ್ವಜವನ್ನು ಹೊತ್ತು ಅಪ್ಪಿ ಮುದ್ದಾಡಿ ಕಿಸ್ ಮಾಡಿದ್ದಾನೆ. ಈ ಫೋಟೋ ಹಾಗೂ ವಿಡಿಯೋ ಕಂಡು ನೆಟ್ಟಗರು ಹಾಗೂ ರಾಷ್ಟ್ರ ಪ್ರೇಮಿಗಳು ಎಷ್ಟು ಡ್ರಾಮಾ ಹಾಗೂ ಈ ಶೋಕಿ ಬೇಕಾ ಎಂದೆಲ್ಲಾ ಟ್ರೊಲ್ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular