ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರ ಜೊತೆ ಸ್ನೇಹಿತೆ ಮಹಿಕಾ ಶರ್ಮಾ ಕೂಡ ಉಪಸ್ಥಿತರಿದ್ದು, ದೇವರ ಆಶೀರ್ವಾದ ಪಡೆದರು.
ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಬಿಗಿ ಭದ್ರತೆಯ ನಡುವೆ ಸಂಚರಿಸಿದ ಈ ಜೋಡಿಯ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಪ್ರೇಮಿಗಳು ಹಾಗೂ ನೆಟ್ಟಿಗರ ಗಮನ ಸೆಳೆದಿರುವುದು ಹಾರ್ದಿಕ್ ಪಾಂಡ್ಯ ಅವರ ಬೋಳು ತಲೆಯ ಹೊಸ ಅವತಾರ.
ಇತ್ತೀಚಿನವರೆಗೆ ವಿಭಿನ್ನ ಹೇರ್ ಸ್ಟೈಲ್ ನಿಂದಲೇ ಗುರುತಿಸಿಕೊಂಡಿದ್ದ ಹಾರ್ದಿಕ್, ಇದ್ದಕ್ಕಿದ್ದಂತೆ ಕೇಶಮುಂಡನ ಮಾಡಿಸಿಕೊಂಡು ಸಂಪೂರ್ಣ ಬೋಳು ತಲೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಪೂಜಾ ವಿಧಿವಿದಾನಗಳಲ್ಲಿ ಭಾಗವಹಿಸಿ ಸರಳವಾಗಿ ದರ್ಶನ ಪಡೆದು ನಿರ್ಗಮಿಸಿದ ಅವರ ಈ ಹೊಸ ಲುಕ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಕ್ರಿಕೆಟ್ ಪಂದ್ಯಗಳಿಂದ ತಾತ್ಕಾಲಿಕ ವಿರಾಮದಲ್ಲಿರುವ ಹಾರ್ದಿಕ್ ಪಾಂಡ್ಯ ಅವರ ಈ ಆಧ್ಯಾತ್ಮಿಕ ಭೇಟಿ ಹಾಗೂ ಹೊಸ ರೂಪದ ಫೋಟೋಗಳು ಪ್ರಸ್ತುತ ಕ್ರೀಡಾ ಲೋಕ ಮತ್ತು ಜಾಲತಾಣಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
VIDEO | Tirupati, Andhra Pradesh: Indian cricketer Hardik Pandya offers prayers during the Suprabhata Seva at the Sri Venkateswara Swamy Temple in Tirumala.
(Full video available on PTI Videos – https://t.co/n147TvrpG7) pic.twitter.com/HKdtPmcyC3
— Press Trust of India (@PTI_News) August 2, 2026

