HomeKarnatakaBREAKING : ಹನೂರು ಶೂಟೌಟ್ ಪ್ರಕರಣಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಎಂಟ್ರಿ ; ತನಿಖೆ...

BREAKING : ಹನೂರು ಶೂಟೌಟ್ ಪ್ರಕರಣಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಎಂಟ್ರಿ ; ತನಿಖೆ ಚುರುಕು

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (KSHRC) ಎಂಟ್ರಿ ಕೊಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಮುಂದಾಗಿದೆ.

ಶೂಟೌಟ್ ನಡೆದ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಎಲ್ಲಿದ್ದರು?, ಅವರ ಚಲನವಲನ ಏನಿತ್ತು? ಘಟನೆ ನಡೆದ ಸ್ಥಳದಲ್ಲಿ ಮಾಂಸ ಎಲ್ಲೆಲ್ಲಿ ಪತ್ತೆಯಾಗಿತ್ತು? ಹಾಗೂ ಅಂದು ಸಂಬಂಧಪಟ್ಟ ಸಿಬ್ಬಂದಿ ಯಾವ ಸ್ಥಳದಲ್ಲಿದ್ದರು? ಎಂಬುದರ ಕುರಿತು ಆಯೋಗ ಮಾಹಿತಿ ಸಂಗ್ರಹಿಸುತ್ತಿದೆ.

ಘಟನೆ ನಡೆದ ಸ್ಥಳ, ಅಲ್ಲಿ ಲಭ್ಯವಾಗಿರುವ ಸಾಕ್ಷ್ಯಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೇಳಿಕೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಶೂಟೌಟ್ಗೂ ಮುನ್ನ ಹಾಗೂ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೇ?, ಶೂಟೌಟ್ಗೆ ಕಾರಣವೇನು ಮತ್ತು ಘಟನೆಯ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರ ಏನು ಎಂಬುದನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಆಯೋಗದ ಪರಿಶೀಲನೆ ಮಹತ್ವ ಪಡೆದಿದೆ. ಆಯೋಗದ ತನಿಖೆಯಿಂದ ಶೂಟೌಟ್ ಪ್ರಕರಣದ ಕುರಿತು ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ಸಾಧ್ಯತೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಂದು ಶೂಟೌಟ್ ಘಟನೆ ನಡೆದಿದೆ. ಅರಣ್ಯದಲ್ಲಿ ಕಳ್ಳಬೇಟೆ ನಡೆಸುತ್ತಿದ್ದ ಶಂಕಿತರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅರಣ್ಯ ಇಲಾಖೆ ಹೇಳಿದೆ. ಘಟನೆಯಲ್ಲಿ ಅಂಥೋಣಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂಬ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅರಣ್ಯದಲ್ಲಿ ಗಸ್ತು ನಡೆಸುತ್ತಿದ್ದ ಸಿಬ್ಬಂದಿಗೆ ಶಂಕಿತ ಕಳ್ಳಬೇಟೆಗಾರರು ಎದುರಾದಾಗ ಗುಂಡಿನ ಚಕಮಕಿ ನಡೆದಿದೆ ಎಂಬುದು ಅಧಿಕಾರಿಗಳ ಪ್ರಾಥಮಿಕ ವಿವರಣೆ. ಘಟನಾ ಸ್ಥಳದಲ್ಲಿ ಜಿಂಕೆ ಮಾಂಸ, ಎರಡು ನಾಡ ಬಂದೂಕುಗಳು, ಹೆಡ್ಟಾರ್ಚ್ಗಳು, ಅಡುಗೆ ಪಾತ್ರೆಗಳು, ಚಾಕು ಹಾಗೂ ಬ್ಯಾಗ್ಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಆದರೆ, ಮೃತರು ನಿಜವಾಗಿಯೂ ಕಳ್ಳಬೇಟೆಗೆ ತೆರಳಿದ್ದರೇ ಅಥವಾ ಬೇರೆ ಉದ್ದೇಶಕ್ಕಾಗಿ ಅರಣ್ಯಕ್ಕೆ ಹೋಗಿದ್ದರೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಎದ್ದಿದೆ. ಗುಂಡಿನ ದಾಳಿ ಹೇಗೆ ಆರಂಭವಾಯಿತು, ಮೂವರು ಯಾವ ಸ್ಥಳದಲ್ಲಿದ್ದರು, ಅರಣ್ಯ ಸಿಬ್ಬಂದಿ ಎಲ್ಲಿದ್ದರು ಮತ್ತು ಎಷ್ಟು ಸುತ್ತು ಗುಂಡು ಹಾರಿಸಲಾಯಿತು ಎಂಬ ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ.

ಘಟನೆ ಬಳಿಕ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಳೂ ನಡೆದಿವೆ. ಇದೀಗ ಮಾನವ ಹಕ್ಕುಗಳ ಆಯೋಗದ ಪರಿಶೀಲನೆಯೂ ಮಹತ್ವ ಪಡೆದಿದೆ.

ಹೀಗಾಗಿ, ಹನೂರು ಶೂಟೌಟ್ ಪ್ರಕರಣದಲ್ಲಿ ಅರಣ್ಯ ಇಲಾಖೆ ನೀಡಿರುವ ಹೇಳಿಕೆ, ಸ್ಥಳೀಯರ ಆರೋಪಗಳು ಮತ್ತು ತನಿಖೆಯಿಂದ ಹೊರಬರುವ ಸಾಕ್ಷ್ಯಗಳ ಆಧಾರದ ಮೇಲೆ ನಿಖರ ಘಟನಾಕ್ರಮ ಸ್ಪಷ್ಟವಾಗಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular