HomeKarnatakaBREAKING : ಹನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ...

BREAKING : ಹನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ರಿವೀಲ್.!

 

ಹನೂರು: ಹನೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಮೃತ ಸೆಬಾಸ್ಟಿಯನ್ ಡೇವಿಡ್ ಕುಮಾರ್ ಅವರ ದೇಹಗಳಲ್ಲಿ ಬಹಳ ಹತ್ತಿರದಿಂದ ಗುಂಡು ಹಾರಿಸಿರುವ ಗುರುತುಗಳು ಪತ್ತೆಯಾಗಿವೆ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಹಗಳ ಎದೆ, ತೊಡೆ ಹಾಗೂ ಹೊಟ್ಟೆ ಭಾಗಗಳಿಗೆ ಗುಂಡೇಟು ಬಿದ್ದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಗುಂಡಿನ ಚಕಮಕಿ ವೇಳೆ ಅತ್ಯಂತ ಸಮೀಪದಿಂದಲೇ ಗುಂಡು ಹಾರಿಸಲಾಗಿದೆ ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಡೇವಿಡ್ ಕುಮಾರ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯ ಬಳಿಕ ಲಭ್ಯವಾದ ಮಾಹಿತಿಯು ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿದೆ.ಹನೂರು ಎನ್‌ಕೌಂಟರ್‌ನಲ್ಲಿ ಆ್ಯಂಟನಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಮೃತಪಟ್ಟಿದ್ದರು. ಇದೀಗ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

ಎದೆಗೆ ಬಿದ್ದ ಗುಂಡಿನಿಂದ ಹೃದಯ, ಶ್ವಾಸಕೋಶ ಛಿದ್ರ

ಎಡ ಎದೆಯ ಮೇಲ್ಭಾಗದಲ್ಲಿ ಸುಮಾರು 8.5 ಸೆಂ.ಮೀ x 6 ಸೆಂ.ಮೀ ಆಳವಾದ ಗಾಯ ಪತ್ತೆಯಾಗಿದೆ. ಗುಂಡಿನ ಹೊಡೆತಕ್ಕೆ 2, 3 ಮತ್ತು 4ನೇ ಪಕ್ಕೆಲುಬುಗಳು ಮುರಿದಿದ್ದು, ಎಡ ಶ್ವಾಸಕೋಶದ ಮೇಲ್ಭಾಗ ಹಾಗೂ ಹೃದಯದ ಎಡಭಾಗಕ್ಕೆ ಗಂಭೀರ ಹಾನಿಯಾಗಿದೆ. ಎದೆಯ ಕುಳಿಯಲ್ಲಿ ಸುಮಾರು 600 ಮಿ.ಲೀ. ರಕ್ತ ಸಂಗ್ರಹವಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ.

ಬಲ ತೊಡೆಯ ಒಳಭಾಗದಲ್ಲೂ ಗಂಭೀರ ಗಾಯವಾಗಿದ್ದು, ಮಾಂಸಖಂಡಗಳು ನಜ್ಜುಗುಜ್ಜಾಗಿವೆ. ಶಾಟ್‌ಗನ್‌ನಿಂದ ಸಿಡಿದ ಪೆಲ್ಲೆಟ್‌ಗಳು ಹೊಟ್ಟೆಯ ಒಳಪದರ, ಯಕೃತ್ತು ಹಾಗೂ ಗುಲ್ಮದವರೆಗೂ ತೂರಿಕೊಂಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಹಣೆಯ, ಮೂಗಿನ ತುದಿ ಹಾಗೂ ಬಲ ಕೆನ್ನೆಯ ಮೇಲೂ ಗಾಯದ ಗುರುತುಗಳು ಪತ್ತೆಯಾಗಿವೆ.

ಎದೆ ಹಾಗೂ ತೊಡೆಗೆ ಬಿದ್ದ ತೀವ್ರ ಶಾಟ್‌ಗನ್‌ ಗಾಯಗಳಿಂದ ಉಂಟಾದ ಅತಿಯಾದ ರಕ್ತಸ್ರಾವ ಮತ್ತು ಆಘಾತದಿಂದ ಸೆಬಾಸ್ಟಿಯನ್ ಡೇವಿಡ್ ಕುಮಾರ್ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ.

ಮೃತದೇಹದಿಂದ ವಶಪಡಿಸಿಕೊಂಡ ಪೆಲ್ಲೆಟ್‌ಗಳು, ಗನ್‌ಶಾಟ್‌ ರೆಸಿಡ್ಯೂ (GSR) ಮಾದರಿಗಳು, ರಕ್ತಸಿಕ್ತ ಬಟ್ಟೆಗಳು ಹಾಗೂ ಇತರ ಮಾದರಿಗಳನ್ನು ಹೆಚ್ಚಿನ ಬ್ಯಾಲಿಸ್ಟಿಕ್ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

 ಹನೂರು ಎನ್‌ಕೌಂಟರ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಶಂಕಿತ ಆರೋಪಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆ್ಯಂಟನಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಮೃತಪಟ್ಟಿದ್ದರು. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಇದೀಗ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿನ ಅಂಶಗಳು ಮಹತ್ವ ಪಡೆದುಕೊಂಡಿವೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular