ಗಲ್ಲು ಶಿಕ್ಷೆಯ ಬದಲಿಗೆ ವಿಷಕಾರಿ ಇಂಜೆಕ್ಷನ್‌ನಂತಹ ‘ಕಡಿಮೆ ನೋವು ಉಂಟುಮಾಡುವ’ ಪರ್ಯಾಯ ವಿಧಾನಗಳನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಹೌದು. ಮರಣದಂಡನೆ ಜಾರಿಗೊಳಿಸುವ ವೇಳೆ ಗಲ್ಲು ಶಿಕ್ಷೆಯ ಬದಲಿಗೆ ವಿಷಕಾರಿ ಇಂಜೆಕ್ಷನ್‌ನಂತಹ ಕಡಿಮೆ ನೋವು ಉಂಟುಮಾಡುವ ಪರ್ಯಾಯ ವಿಧಾನಗಳನ್ನು ಅಳವಡಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸದ್ಯ ಭಾರತದಲ್ಲಿ ಮರಣದಂಡನೆ ಜಾರಿಗೊಳಿಸುವ ವಿಧಾನವಾಗಿ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠ ಸ್ಪಷ್ಟಪಡಿಸಿದೆ. ಆದರೆ, ಹೊಸ ವೈಜ್ಞಾನಿಕ ಅಥವಾ ವೈದ್ಯಕೀಯ ಸಾಕ್ಷ್ಯಗಳು ಲಭ್ಯವಾದರೆ ಪರ್ಯಾಯ ವಿಧಾನಗಳ ಕುರಿತು ಭವಿಷ್ಯದಲ್ಲಿ ಪರಿಶೀಲನೆ ನಡೆಸಲು ಅವಕಾಶವಿದ್ದು, ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ
ಮರಣದಂಡನೆ ಸಾಂವಿಧಾನಿಕವಾಗಿದೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಸದ್ಯ ದೇಶದಲ್ಲಿ ಮರಣದಂಡನೆ ಜಾರಿಗೊಳಿಸುವ ವಿಧಾನವಾಗಿ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಯಲಿದೆ ಎಂದು ತಿಳಿಸಿದೆ.
ಮರಣದಂಡನೆಗೆ ಗುರಿಯಾಗಿರುವ ವ್ಯಕ್ತಿಗೆ ಕಡಿಮೆ ನೋವು ಉಂಟುಮಾಡುವ ಹಾಗೂ ಅವರ ಘನತೆಯನ್ನು ಕಾಪಾಡುವ ರೀತಿಯಲ್ಲಿ ಶಿಕ್ಷೆ ಜಾರಿಗೊಳಿಸಲು ಗಲ್ಲು ಶಿಕ್ಷೆಯ ಬದಲಿಗೆ ಪರ್ಯಾಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.
ಮರಣದಂಡನೆ ಸಾಂವಿಧಾನಿಕವೇ
ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಮೂರು ತೀರ್ಪುಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಅರ್ಜಿದಾರರ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಿಂದಿನ ಮೂರು ತೀರ್ಪುಗಳನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಹಾಗೆ ಮಾಡಲು ಸೂಕ್ತ ಆಧಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಗಲ್ಲು ಶಿಕ್ಷೆಯ ಬದಲಿಗೆ ವಿಷಕಾರಿ ಇಂಜೆಕ್ಷನ್‌ನಂತಹ ‘ಕಡಿಮೆ ನೋವು ಉಂಟುಮಾಡುವ’ ಪರ್ಯಾಯ ವಿಧಾನಗಳನ್ನು ಜಾರಿಗೆ ತರಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮರಣದಂಡನೆ ಸಾಂವಿಧಾನಿಕವಾಗಿದ್ದು, ಸದ್ಯ ಭಾರತದಲ್ಲಿ ಅದನ್ನು ಜಾರಿಗೊಳಿಸುವ ವಿಧಾನವಾಗಿ ಗಲ್ಲಿಗೇರಿಸುವ ಪದ್ಧತಿಯೇ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ಏನಿತ್ತು?
ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯಲ್ಲಿ ಗಲ್ಲು ಶಿಕ್ಷೆಗೆ ಪರ್ಯಾಯವಾಗಿ ವಿಷಕಾರಿ ಇಂಜೆಕ್ಷನ್, ಗುಂಡಿಕ್ಕುವುದು, ವಿದ್ಯುತ್‌ಘಾತ ಅಥವಾ ಗ್ಯಾಸ್ ಚೇಂಬರ್ ಮೂಲಕ ಮರಣದಂಡನೆ ಜಾರಿಗೊಳಿಸುವ ವಿಧಾನಗಳನ್ನು ಸೂಚಿಸಲಾಗಿತ್ತು.
ಈ ವಿಧಾನಗಳ ಮೂಲಕ ಅಪರಾಧಿ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಗಲ್ಲು ಶಿಕ್ಷೆ ಅತ್ಯಂತ ನೋವಿನಿಂದ ಕೂಡಿದ್ದು, ಅಮಾನವೀಯ ಹಾಗೂ ಕ್ರೂರವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (PIL) ವಾದಿಸಲಾಗಿತ್ತು.
CrPCಯ ಸೆಕ್ಷನ್ 354(5) ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವುದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಮತ್ತು ಘನತೆಯುತವಾಗಿ ಸಾಯುವ ಹಕ್ಕನ್ನು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ಗುರುತಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಗಲ್ಲಿಗೇರಿಸಿದ ಬಳಿಕ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಲು ಸುಮಾರು 40 ನಿಮಿಷಗಳವರೆಗೆ ಸಮಯ ಬೇಕಾಗಬಹುದು. ಆದರೆ ಗುಂಡಿಕ್ಕುವುದು ಅಥವಾ ವಿಷಕಾರಿ ಇಂಜೆಕ್ಷನ್ ನೀಡುವ ಮೂಲಕ ಈ ಪ್ರಕ್ರಿಯೆ ಸುಮಾರು 5 ನಿಮಿಷಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಮರಣದಂಡನೆ ಜಾರಿಗೊಳಿಸುವ ಸಂದರ್ಭ ಸಾಧ್ಯವಾದಷ್ಟು ಕಡಿಮೆ ನೋವು ಉಂಟುಮಾಡುವ ರೀತಿಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಹೇಳಿರುವ ವಿಶ್ವಸಂಸ್ಥೆಯ ನಿರ್ಣಯವನ್ನೂ ರಿಷಿ ಮಲ್ಹೋತ್ರಾ ತಮ್ಮ ವಾದಕ್ಕೆ ಆಧಾರವಾಗಿ ಉಲ್ಲೇಖಿಸಿದ್ದರು.

