BIG NEWS: ಸಂಕಷ್ಟದ ಬೆನ್ನಲ್ಲೇ ಪತ್ನಿಯನ್ನೂ ಭೇಟಿಯಾಗದೇ ದೇವರ ಮೊರೆ ಹೋದ ಹೆಚ್.ಡಿ.ರೇವಣ್ಣ; ಮುಂಜಾನೆಯಿಂದಲೇ ಹಲವು ದೇವಾಲಯಗಳಿಗೆ ಭೇಟಿ

ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದು ಮೂರು ದಿನಗಳು ಕಳೆದರೂ ಈವರೆಗೂ ಪತ್ನಿ ಭವಾನಿ ರೇವಣ್ಣ ಭೇಟಿ ಸಾಧ್ಯವಾಗಿಲ್ಲ.

ಸದ್ಯ ಭವಾನಿ ರೇವಣ್ಣಗೂ ಎಸ್ಐಟಿ ನೋಟಿಸ್ ನೀಡಿದ್ದು, ಭವಾನಿ ರೇವಣ್ಣ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಸಾಲಿಗ್ರಾಮದಿಂದಲೇ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಭೇಟಿ ನೀಡಿ, ಮತ್ತೆ ಸಾಲಿಗ್ರಾಮಕ್ಕೆ ವಾಪಾಸ್ ಆಗಿದ್ದಾರೆ ಎನ್ನಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ರೇವಣ್ಣ ಮೂರು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದು, ಪತ್ನಿ ಭೇಟಿಗೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಈ ನಡುವೆ ಹೆಚ್.ಡಿ.ರೇವಣ್ಣ ಇಂದು ಮುಂಜಾನೆಯಿಂದಲೇ ಟೆಂಪಲ್ ರನ್ ಆರಂಭಿಸಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಜಯನಗರದ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗವಿಗಂಗಾಧರೇಶ್ವರ ದೇವಾಲಯಕ್ಕೆ ತೆರಳಿ ಗವಿಗಂಗಾಧರೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read