HomeKarnatakaBIG NEWS: ಕಾಂಗ್ರೆಸ್ ಶಾಸಕರೊಬ್ಬರ ಷಡ್ಯಂತ್ರದಿಂದ ರೇವಣ್ಣ ಬಂಧನ; ಮಾಜಿ ಶಾಸಕ ಲಿಂಗೇಶ್ ಆರೋಪ

BIG NEWS: ಕಾಂಗ್ರೆಸ್ ಶಾಸಕರೊಬ್ಬರ ಷಡ್ಯಂತ್ರದಿಂದ ರೇವಣ್ಣ ಬಂಧನ; ಮಾಜಿ ಶಾಸಕ ಲಿಂಗೇಶ್ ಆರೋಪ

ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಿದ್ದು, ಇದರ ಹಿಂದೆ ಕಾಂಗ್ರೆಸ್ ಶಾಸಕರೊಬ್ಬರ ಕೈವಾಡವಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗೇಶ್, ಯಾವುದೇ ತಪ್ಪು ಮಾಡದ ರೇವಣ್ಣರನ್ನು ರಾಜಕೀಯ ಷಡ್ಯಂತ್ರದಿಂದ ವಿನಾಕಾರಣ ಬಂಧಿಸಲಾಗಿದೆ. ಇದರ ಹಿಂದೆ ಕೆ.ಆರ್.ನಗರದ ಶಾಸಕರೊಬ್ಬರ ಚಿತಾವಣೆಯಿದೆ ಎಂದು ಪರೋಕ್ಷವಾಗಿ ಶಾಸಕ ರವಿಶಂಕರ್ ವಿರುದ್ಧ ಆರೋಪ ಮಾಡಿದ್ದಾರೆ.

ಹೆಚ್.ಡಿ.ರೇವಣ್ಣ ತಮ್ಮ ತಂದೆ-ತಾಯಿ ಆರೋಗ್ಯ ವಿಚಾರಿಸಲೆಂದು ದೇವೇಗೌಡರ ಮನೆಗೆ ಹೋಗಿದ್ದರು ಹೊರತು ಅವರ ಮನೆಯಲ್ಲಿ ಅವಿತು ಕೂತಿರಲಿಲ್ಲ ಎಂದು ಲಿಂಗೇಶ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular