HomeKarnatakaBIG NEWS: ಅಣ್ಣ ಅಂತೀರಲ್ಲ, ಇನ್ಮುಂದಾದರೂ ರಾಜ್ಯ ಲೂಟಿ ಮಾಡುವುದನ್ನು ನಿಲ್ಲಿಸಿ; ಡಿಸಿಎಂ ವಿರುದ್ಧ ಮತ್ತೆ...

BIG NEWS: ಅಣ್ಣ ಅಂತೀರಲ್ಲ, ಇನ್ಮುಂದಾದರೂ ರಾಜ್ಯ ಲೂಟಿ ಮಾಡುವುದನ್ನು ನಿಲ್ಲಿಸಿ; ಡಿಸಿಎಂ ವಿರುದ್ಧ ಮತ್ತೆ ಗರಂ ಆದ HDK

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಬೇಡಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ವಪಕ್ಷ ಸಭೆಗೆ ಆಹ್ವಾನ ನೀಡಿದ್ದಾರೆ. ಸರ್ವಪಕ್ಷ ಸಭೆಗೆ ಹೋಗುವುದು ನನ್ನ ಕರ್ತವ್ಯ ಎಂದರು. ಆದರೆ ಕುಮಾರಸ್ವಾಮಿ ಹೇಳಿದಂತೆ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾನು ತಮಿಳುನಾಡಿಗೆ ನೀರು ಬಿಡಿ ಎಂದು ಹೇಳಿದ್ದೆನಾ? ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಾ ಉಡಾಫೆಯಾಗಿ ಮಾತನಾಡುತ್ತಿದ್ದಾರೆ ಎಂದು ಗರಂ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಟ್ವೀಟ್ ಬಗ್ಗೆ ಡಿಸಿಎಂ ಪ್ರಸ್ತಾಪಿಸಿದ್ದಾರೆ. ನಾನು ಏನಾದರೂ ತಮಿಳುನಾಡಿಗೆ ನೀರು ಬಿಡ್ತೀನಿ ಎಂದಿದ್ದೇನಾ? ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಬೇಡಿ ಎಂದಿದ್ದೇನೆ. ಹುಡಗಾಟವಾಡಬೇಡಿ, ಗಾಂಭೀರ್ಯತೆ ಕಪಾಡಿಕೊಳ್ಳಿ… ಅಣ್ಣ ಅಂತೀರಲ್ಲ, ಇನ್ಮುಂದಾದರೂ ರಾಜ್ಯ ಲೂಟಿ ಮಾಡುವುದನ್ನು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular