HomeLatest NewsBIG NEWS: ಅವಿವೇಕಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಹಾಕಿ: ಕುಮಾರಸ್ವಾಮಿ ಆಗ್ರಹ

BIG NEWS: ಅವಿವೇಕಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಹಾಕಿ: ಕುಮಾರಸ್ವಾಮಿ ಆಗ್ರಹ

ನವದೆಹಲಿ: ಆರ್ ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ದುರಂತಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅವಿವೇಕಿತನವೇ ಕಾರಣ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಅಚಾತುರ್ಯ, ಆತುರ ಹಾಗೂ ಅವಿವೇಕಿತನದಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಕಾರಣರಾದ ಅವಿವೇಕಿ ಡಿಸಿಎಂ ಡಿ.ಕೆ.ಶಿಯನ್ನು ಮೊದಲು ಸಂಪುಟದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಲ್ಲಿ ಇರುವುದು ಕಟುಕರ ಸರ್ಕಾರ. ಸಿಎಂ ಸಿದ್ದರಾಮಯ್ಯ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಇವರು ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ. ಸರ್ಕಾರದ ದುರಾಡಳಿತ, ಬೇಜವಾಬ್ದಾರಿತನವೇ ದುರಂತಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular