HomeKarnatakaBIG NEWS : ಮೂರು ಬಾರಿ ಪುನರ್ಜನ್ಮ ಪಡೆದಿದ್ದೇನೆ, ಸ್ಟ್ರೋಕ್ ಆದಾಗ ನಿರ್ಲಕ್ಷ್ಯ ಬೇಡ...

BIG NEWS : ಮೂರು ಬಾರಿ ಪುನರ್ಜನ್ಮ ಪಡೆದಿದ್ದೇನೆ, ಸ್ಟ್ರೋಕ್ ಆದಾಗ ನಿರ್ಲಕ್ಷ್ಯ ಬೇಡ : HDK ಭಾವುಕ

ಬೆಂಗಳೂರು: ಲಘು ಸ್ಟ್ರೋಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕುಮಾರಸ್ವಾಮಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಪಾರ್ಶ್ವವಾಯುನಂತಹ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ದೇವರ ದಯೆ, ತಂದೆ-ತಾಯಿ ಆಶಿರ್ವಾದದಿಂದ ನಾನು ಗುಣಮುಖನಾಗಿದ್ದೇನೆ. ಆಗಸ್ಟ್ 30 ರಂದು ಮುಂಜಾನೆ 3:30ಕ್ಕೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದೆ. ನಾನು ನಿರ್ಲಕ್ಷ್ಯ ಮಾಡಿದ್ದರೆ ನಿಮ್ಮೊಂದಿಗೆ ಈಗ ಸಹಜವಾಗಿ ಮಾತನಾಡು ಸಾಧ್ಯವಾಗುತ್ತಿರಲಿಲ್ಲ ಎಂದು  ಭಾವುಕರಾಗಿ ಮಾತನಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

64 ವರ್ಷದಲ್ಲಿ ಮೂರು ಬಾರಿ ಪುನರ್ಜನ್ಮ ಪಡೆದಿದ್ದೇನೆ. ವೈದ್ಯಕೀಯ ಹಾಗೂ ಭಗವಂತನ ದಯೆಯಿಂದ ಬದುಕಿದ್ದೇನೆ. ಚಂದ್ರಯಾನದ ಯಶಸ್ಸಿನ ಬಳಿಕ ನಮ್ಮ ವಿಜ್ಞಾನಿಗಳು ಸೂರ್ಯ ಯಾನ ಕೈಗೊಂಡಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದೇವೆ. ಹಾಗೇ ವೈದ್ಯಕೀಯ ಕ್ಷೇತ್ರದಲ್ಲಿಯೂ ನಮ್ಮ ರಾಜ್ಯದಲ್ಲಿ, ಬೆಂಗಳೂರಿನಲ್ಲಿ ನುರಿತ ವೈದ್ಯರಿದ್ದಾರೆ. ಸ್ಟ್ರೋಕ್ ನಂತಹ ಸಮಸ್ಯೆಯಾದಾಗ ತಕ್ಷಣ ಗೋಲ್ಡನ್ ಅವರ್ ಒಳಗೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಹಣ ಖರ್ಚಾಗುತ್ತದೆ. ಆದರೆ ಜೀವಕ್ಕಿಂತ ಹಣ ಮುಖ್ಯವಲ್ಲ. ಅಂದು ನಾನು ಮುಂಜಾನೆ 3:30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೆ. ಕೇವಲ ಒಂದು ಗಂಟೆಯಲ್ಲಿ ನನ್ನ ಆರೋಗ್ಯವನ್ನು ವೈದ್ಯರು ಮೊದಲ ಸ್ಥಿತಿಗೆ ತಂದರು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular