HomeKarnatakaBIG NEWS: ರೇವಣ್ಣ ಸ್ವಲ್ಪ ದುಡುಕಿನ ಸ್ವಭಾವದವರು; ಆದರೂ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕಡಿಮೆಯಿಲ್ಲ;...

BIG NEWS: ರೇವಣ್ಣ ಸ್ವಲ್ಪ ದುಡುಕಿನ ಸ್ವಭಾವದವರು; ಆದರೂ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕಡಿಮೆಯಿಲ್ಲ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆಯಲ್ಲಿ ಸಮಸ್ಯೆ ಇಲ್ಲ. ಹಾಸನದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರಿಗೆ ಸ್ವಲ್ಪ ದುಡುಕಿನ ಸ್ವಭಾವ. ದುಡುಕಿನ ಸ್ವಭಾವದಿಂದಲೇ ಅವರು ಜನರ ವಿರೋಧ ಕಟ್ಟಿಕೊಳ್ಳುತ್ತಾರೆ. ಹೆಚ್.ಡಿ.ದೇವೇಗೌಡರ ಬೆನ್ನೆಲುಬಾಗಿ ನಿಂತು ರೇವಣ್ಣ ಬೆಳೆದವರು ಎಂದರು.

ರೇವಣ್ಣ ಅವರದ್ದು ದುಡುಕಿನ ಸ್ವಭಾವವಾದರೂ ಮಾಡಿರುವ ಅಭಿವೃದ್ಧಿ ಕೆಲಸಗಳೇನೂ ಕಡಿಮೆ ಇಲ್ಲ. ಯಾರದ್ದಾದರೂ ಮನಸ್ಸಿಗೆ ನಮ್ಮಿಂದ ನೋವಾಗಿದ್ದಾರೆ, ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ. ತಪ್ಪುಗಳನ್ನು ಕ್ಷಮಿಸಿ ಬೆಳೆಸುವವರು ನೀವೇ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ 5 ವರ್ಷಗಳಲ್ಲಿ ಹಾಸನದಲ್ಲಿ ಕೆಲ ಘಟನೆಗಳು ನಡೆದಿವೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ತಮ್ಮ ರಾಜಕೀಯ ಜೀವನದಲ್ಲಿ ದೇವೇಗೌಡರಿಗೆ ಅಧಿಕಾರ ಸಿಕ್ಕಿದ್ದು ಕೇವಲ ಮೂರ್ನಾಲ್ಕು ವರ್ಷ. ಬಹುಶಃ ಅವರಿಗೆ ಕನಿಷ್ಠ 5 ವರ್ಷ ಅವಕಾಶ ಸಿಕ್ಕಿದ್ದರೆ ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು ಎಂದು ತಿಳಿಸಿದ್ದಾರೆ.

ಪ್ರೀತಂ ಗೌಡ ಯುವಕರು. ಉತ್ಸಾಹದಲ್ಲಿ ಏನೋ ಮಾತನಾಡುತ್ತಾರೆ. ಅವರನ್ನೇ ಕಣಕ್ಕಿಳಿಸುವುದಾದರೆ ಚರ್ಚೆ ಮಾಡೋಣ. ಅವರು-ನಾವು ಅಣ್ಣ-ತಮ್ಮನ ರೀತಿ ಹೋಗಬೇಕಲ್ಲವೇ? ಮಾತಿನ ಬಿರುಸಿನಲ್ಲಿ ಏನೋ ಮಾತನಾಡಿದ್ದಾರೆ ಸರಿ ಮಾಡೋಣ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular