HomeLatest Newsಕ್ರಿಕೆಟ್ ಆಡುತ್ತಿದ್ದ ವೇಳೆಯೇ ಹೃದಯಾಘಾತ; 45 ವರ್ಷದ ವ್ಯಕ್ತಿ ಸಾವು

ಕ್ರಿಕೆಟ್ ಆಡುತ್ತಿದ್ದ ವೇಳೆಯೇ ಹೃದಯಾಘಾತ; 45 ವರ್ಷದ ವ್ಯಕ್ತಿ ಸಾವು

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ.

ಇಲ್ಲಿನ ಶಾಸ್ತ್ರಿ ಮೈದಾನದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಮಯೂರ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆಟವಾಡುತ್ತಿದ್ದ ವೇಳೆ ನಡುಗಲು ಆರಂಭಿಸಿದ ಮಯೂರ್‌, ಕೂಡಲೇ ನೆಲದ ಮೇಲೆ ಕುಳಿತು ಹಾಗೇ ಕುಸಿದುಬಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ನೇಹಿತರು ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯವ ವೇಳೆಗಾಗಲೇ ಮಯೂರ್‌ ಜೀವ ಹೊರಟುಹೋಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಚಿನ್ನದ ಕುಶಲಕರ್ಮಿಯಾಗಿದ್ದ ಮಯೂರ್‌ ತಮ್ಮ ಕುಟುಂಬದ ಏಕೈಕ ದುಡಿಯುವ ಶಕ್ತಿಯಾಗಿದ್ದರು. ಅವರಿಗೆ ಯಾವುದೇ ರೀತಿಯ ದುರಭ್ಯಾಸವಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಗುಜರಾತ್‌ನಲ್ಲಿ ಸಂಭವಿಸುತ್ತಿರುವ ಎಂಟನೇ ಘಟನೆ ಇದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular