HomeLatest NewsBIG NEWS : 'ಶಾಲಾ ಶಿಕ್ಷಣ ಇಲಾಖೆ'ಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಬಿಡುಗಡೆ

BIG NEWS : ‘ಶಾಲಾ ಶಿಕ್ಷಣ ಇಲಾಖೆ’ಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ ಸರ್ಕಾರದ ಉಲ್ಲೇಖಿತ 09 ರ ಆದೇಶದಲ್ಲಿ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ.

2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ಸಿಬ್ಬಂದಿಗಳ ವರ್ಗಾವಣೆಯನ್ನು ಒಂದೇ ಸ್ಥಳದಲ್ಲಿ ಸಲ್ಲಿಸಿರುವ ಸೇವಾ ಅವಧಿಯ ಆಧಾರದಲ್ಲಿನ ಗ್ರೇಸ್ ಅಂಕಗಳ ಜೇಷ್ಮತೆಯನ್ನು ಪರಿಗಣಿಸಿ ಆನ್ ಲೈನ್ ಮುಖಾಂತರದಲ್ಲಿ ಏಕ ಪಟ್ಟಿ ಮಾದರಿಯಲ್ಲಿ ಕೌನ್ಸಿಲಿಂಗ್ ಮುಖೇನ ನಿಗದಿತ ಮಿತಿಯೊಳಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದ್ದು ಮಾರ್ಗಸೂಚಿಯನ್ವಯ ಆಗತ್ಯ ಕ್ರಮ ತೆಗೆದುಕೊಳ್ಳಲು ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ.

ಈ ಕೆಳಕಂಡಂತೆ ನಿಗಧಿಪಡಿಸಿರುವ ಸಕ್ಷಮ ಪ್ರಾಧಿಕಾರವು ಜೇಷ್ಠತಾ ಘಟಕದ ವ್ಯಾಪ್ತಿಯಲ್ಲಿ ಬೋಧಕೇತರ ಸಿಬ್ಬಂದಿಯ ವರ್ಗಾವಣೆಯನ್ನು ಕಂಡಿಕೆ 04 ರಲ್ಲಿ ನಿಗದಿಪಡಿಸಿರುವ ಶೇಕಡಾವಾರು ಪ್ರಮಾಣ ಮೀರದಂತ ನಿರ್ದಿಷ್ಟಪಡಿಸಿದ ದಿನಾಂಕದಂದು ಕೌನ್ಸಿಲಿಂಗ್ ಮುಖೇನ ಮಾರ್ಗಸೂಚಿಯನ್ನು ಅನುಸರಿಸಿ ವರ್ಗಾವಣೆಗೆ ಕ್ರಮ ವಹಿಸಲು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ಉಲ್ಲೇಖಿತ (9) ರ ಆದೇಶದಂತೆ 2025-26 ನೇ ಸಾಲಿನಲ್ಲಿ ಇಲಾಖೆಯಿಂದ ಬೋಧಕೇತರ ‘ಸಿ’ ಮತ್ತು ‘ಡಿ’ ವೃಂದಗಳ ಕಾರ್ಯನಿರತ ವ್ಯಂದ ಬಲದ ಒಟ್ಟು ಶೇ 6 ರನ್ನು ಮೀರದಂತೆ ವರ್ಗಾವಣೆಗಳನ್ನು ಮಾಡಲು ಆದೇಶಿಸಲಾಗಿದೆ ವರ್ಗಾವಣೆಯನ್ನು ಕೋರುವ ಆಯಾ ವೃಂದದ ಎಲ್ಲಾ ಅರ್ಜಿಗಳ ಕುರಿತಂತೆ ಒಂದ ಪಟ್ಟಿಯಂತೆ ಅಂಕಗಳ ಜೀಷ್ಟ್ಯತೆಯನ್ನು ವರಿಗಣಿಸಿ ROUND ROBIN ಮಾದರಿಯಲ್ಲಿ ನಡೆಸಲಾಗುವುದು. ಆಯಾ ಜಿಲ್ಲಾ ಕೇಂದ್ರಗಳಲ್ಲಿಯೇ ಅಯಾ ಅರ್ಜಿದಾರರು ಹಾಜರಾಗಿ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಿದೆ.

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    Most Popular