HomeKarnatakaGruhalakshmi Scheme: ಯಜಮಾನಿಯರೇ ಗಮನಿಸಿ : `ಗೃಹಲಕ್ಷ್ಮೀ’ ಯೋಜನೆ ಅರ್ಜಿ ಶುಲ್ಕ ಪರಿಷ್ಕರಣೆ

Gruhalakshmi Scheme: ಯಜಮಾನಿಯರೇ ಗಮನಿಸಿ : `ಗೃಹಲಕ್ಷ್ಮೀ’ ಯೋಜನೆ ಅರ್ಜಿ ಶುಲ್ಕ ಪರಿಷ್ಕರಣೆ

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಅರ್ಜಿ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. ಯೋಜನೆ ನೋಂದಣಿ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಹೊರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ.

ಈ ಹಿಂದಿನ ಸುತ್ತೋಲೆ ಹಿಂಪಡೆದು ದರ ಪರಿಷ್ಕರಣೆ ಮಾಡಲಾಗಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯುವ ಪ್ರತಿ ನೋಂದಣಿಗೆ 10 ರೂ., ಮಂಜೂರಾತಿ ಪತ್ರಕ್ಕೆ 2 ರೂ. ನಿಗದಿಪಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಶುಲ್ಕವನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡುವ ಬಗ್ಗೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆದುಕೊಳ್ಳುವ ಗೃಹಲಕ್ಷ್ಮಿ ಯೋಜನೆಯ ಪ್ರತಿ ಅರ್ಜಿಗೆ 20 ರೂಪಾಯಿಯನ್ನು ಇಲಾಖೆಯಿಂದ ವರ್ಗಾವಣೆ ಮಾಡಲಾಗುವುದು ಎಂದು ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಪ್ರತಿ ನೋಂದಣಿಗೆ 15 ರೂಪಾಯಿ, ಮಂಜೂರಾತಿ ಪತ್ರದ ಪ್ರತಿಗೆ 5 ರೂಪಾಯಿ ನೀಡಲು ತೀರ್ಮಾನಿಸಲಾಗಿತ್ತು,

ಬಾಪೂಜಿ ಸೇವಾ ಕೇಂದ್ರಕ್ಕೂ ಶುಲ್ಕ ಪಾವತಿ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆರ್ಥಿಕ ಇಲಾಖೆ ಪ್ರತಿ ನೋಂದಣಿಗೆ 10 ರೂ., ಮಂಜೂರಾತಿ ಪತ್ರದ ಪ್ರತಿಗೆ 2 ರೂ. ನಿಗದಿಪಡಿಸಿದ್ದು, ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಹಿಂಪಡೆದುಕೊಂಡು ಅರ್ಜಿ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular