HomeLatest NewsBIG NEWS: ಗೃಹಲಕ್ಷ್ಮೀ ಯೋಜನೆ: ಹಣ ಹಾಕಿವುದಾಗಿ ಹೇಳಿ 20 ದಿನಗಳ ಕಳೆದರೂ ಫಲಾನುಭವಿಗಳ ಖಾತೆಗೆ...

BIG NEWS: ಗೃಹಲಕ್ಷ್ಮೀ ಯೋಜನೆ: ಹಣ ಹಾಕಿವುದಾಗಿ ಹೇಳಿ 20 ದಿನಗಳ ಕಳೆದರೂ ಫಲಾನುಭವಿಗಳ ಖಾತೆಗೆ ಇನ್ನೂ ಜಮೆಯಾಗದ ಹಣ

ಹುಬ್ಬಳ್ಳಿ/ಬೆಳಗಾವಿ: ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಇನ್ನೆರಡು ದಿನಗಳಲ್ಲಿ ಹಾಕುವುದಾಗಿ ಹೇಳಿ 20 ದಿನಗಳು ಕಳೆದರೂ ಈವರೆಗೂ ಖಾತೆಗೆ ಜಮೆಯಾಗಿಲ್ಲ. ಇದರಿಂದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಚಿವರ ತವರು ಜಿಲ್ಲೆ ಬೆಳಗಾವಿಯಲ್ಲಿಯೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮೀ ಹಣ ಹಾಕುವುದಾಗಿ ಹೇಳಿ ಈವರೆಗೆ ಸಮರ್ಪಕವಾಗಿ ಹಾಕಿಲ್ಲ. ಕೆಲ ಫಲಾನುಭವಿಗಳ ಖಾತೆಗೆ ಇನ್ನೂ 19ನೇ ಕಂತಿನ ಹಣವೇ ಬಂದಿಲ್ಲ. ಅದರ ನಡುವೆ ಫೆಬ್ರವರಿ ಹಾಗೂ ಮಾರ್ಚ್ ಎರಡು ತಿಂಗಳ ಹಣ ಎರಡು ದಿನಗಳಲ್ಲಿ ಜಮೆ ಮಾಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಚಿವರು ಹೇಳಿದ್ದರು. ಅಧಿವೇಶನ ಮುಗಿದು ಇಷ್ಟು ದಿನವಾದರೂ ಖಾತೆಗೆ ಹಣ ಬಂದಿಲ್ಲ. ಸರ್ಕಾರ ಈಗ 24ನೇ ಕಂತಿನ ಹಣ ಬಿಡುಗಡೆಯಾಗಿದೆ ಎನ್ನುತ್ತಿದೆ. ಆದರೆ ನಾಲ್ಕು ತಿಂಗಳಿಂದಲೂ ಯಾವುದೇ ಹಣ ಖಾತೆಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ತಿಂಗಳ ಗೃಹಲಕ್ಷ್ಮೀ ಹಣದ ಬಗ್ಗೆ ಸರ್ಕಾರ ಸದನಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಕಂಡು ಹಿಡಿದಿದ್ದ ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ, ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಇನ್ನೆರಡು ದಿನದಲ್ಲಿ ಹಣ ಹಾಕುವುದಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದರು. ಸಿಎಂ ಹೇಳಿ ಇಪ್ಪತ್ತು ದಿನಗಳಾದರೂ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಸ್ಪಷ್ಟನೆ ನೀಡುತ್ತಿಲ್ಲ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಎಲ್ಲಿ ಹೋಯಿತು? ಈಗ ಫಲಾನುಭವಿಗಳ ಖಾಅತೆಗೆ ಹಣ ಹಾಕಲು ವಿಳಂಬವಾಗುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular