HomeAgricultureಮನೆಯ ಕುಂಡದಲ್ಲೇ ಅರಳಲಿದೆ ಕೆಂಪು ಬಂಗಾರ ಕಾಶ್ಮೀರಿ ಕೇಸರಿ ಬೆಳೆಯಲು ರೈತರು ನೀಡಿದ ಬೆಸ್ಟ್ ಟಿಪ್ಸ್...

ಮನೆಯ ಕುಂಡದಲ್ಲೇ ಅರಳಲಿದೆ ಕೆಂಪು ಬಂಗಾರ ಕಾಶ್ಮೀರಿ ಕೇಸರಿ ಬೆಳೆಯಲು ರೈತರು ನೀಡಿದ ಬೆಸ್ಟ್ ಟಿಪ್ಸ್ ಇಲ್ಲಿದೆ

ಭಾರತೀಯ ಅಡುಗೆ ಮನೆಯ ಅತ್ಯಂತ ದುಬಾರಿ ಮಸಾಲೆ ಪದಾರ್ಥ ಅಂದ್ರೆ ಅದು ಕೇಸರಿ. ಕೇವಲ ಒಂದು ಗ್ರಾಂ ಕೇಸರಿಗೆ ಮಾರುಕಟ್ಟೆಯಲ್ಲಿ 200 ರಿಂದ 300 ರೂಪಾಯಿ ಬೆಲೆಯಿದೆ ಇದನ್ನು ಬೆಳೆಯುವ ಕಠಿಣ ವಿಧಾನ ಮತ್ತು ಕೊಯ್ಲಿನ ಶ್ರಮವೇ ಇದರ ಬೆಲೆ ಇಷ್ಟೊಂದು ದುಬಾರಿಯಾಗಲು ಕಾರಣ. ಸಾಮಾನ್ಯವಾಗಿ ಕೇಸರಿ ಬೆಳೆಯಲು ಕಾಶ್ಮೀರದ ತಂಪಾದ ಹವಾಮಾನವೇ ಬೇಕು ಎಂಬ ನಂಬಿಕೆಯಿತ್ತು. ಆದರೆ, ಈಗ ಕಾಲ ಬದಲಾಗಿದೆ ಪ್ರಗತಿಪರ ರೈತರು ಆಧುನಿಕ ಇಂಡೋರ್ ಫಾರ್ಮಿಂಗ್ ತಂತ್ರಜ್ಞಾನ ಬಳಸಿ, ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಕಾಶ್ಮೀರದ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆಯುತ್ತಿದ್ದಾರೆ. ನೀವೂ ಕೂಡ ಕಡಿಮೆ ಜಾಗದಲ್ಲಿ ಈ ಕೆಂಪು ಬಂಗಾರ ಬೆಳೆದು ಕೈತುಂಬಾ ಹಣ ಗಳಿಸಬೇಕೇ? ಹಾಗಿದ್ದರೆ ಯಶಸ್ವಿ ರೈತರು ನೀಡಿರುವ ಈ ಬೆಲೆಬಾಳುವ ಟಿಪ್ಸ್‌ಗಳನ್ನು ಮಿಸ್ ಮಾಡದೆ ಓದಿ

ಕೇಸರಿ ಕೃಷಿಯಲ್ಲಿ ಈಗ ಇಂಡೋರ್ ಏರೋಪೋನಿಕ್ಸ್ (Indoor Aeroponics) ಪದ್ಧತಿ ಬಹಳ ಜನಪ್ರಿಯವಾಗಿದೆ. ಮಣ್ಣಿನ ಅಗತ್ಯವಿಲ್ಲದೇ, ಕೇವಲ ಗಾಳಿಯಲ್ಲಿ ತೇವಾಂಶ ಮತ್ತು ಪೋಷಕಾಂಶ ನೀಡಿ ಕೇಸರಿ ಬೆಳೆಯುವ ಕಲೆ ಇದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1.ಕೊಠಡಿಯ ಸಿದ್ಧತೆ (Setup Design)

ಕೇಸರಿಗೆ ನಿರ್ದಿಷ್ಟ ತಾಪಮಾನದ ಅವಶ್ಯಕತೆ ಇರುವುದರಿಂದ, ನಿಮ್ಮ ಮನೆಯ ಒಂದು ಕೊಠಡಿಯನ್ನು ಈ ಕೆಳಗಿನಂತೆ ಸಿದ್ಧಪಡಿಸಬೇಕು:

ಸ್ಥಳ: ಕನಿಷ್ಠ 8×10 ಅಡಿ ವಿಸ್ತೀರ್ಣದ ಒಂದು ಕೊಠಡಿ.ತಾಪಮಾನ ನಿಯಂತ್ರಣ ಕೊಠಡಿಯಲ್ಲಿ AC ಮತ್ತು ಚಿಲ್ಲರ್ (Chiller) ಅಳವಡಿಸಿ. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ತಾಪಮಾನವು 15°C ನಿಂದ 20°C ಇರಬೇಕು. ಹೂ ಬಿಡುವ ಸಮಯದಲ್ಲಿ ಇದನ್ನು 5°C – 7°C ಗೆ ಇಳಿಸಬೇಕು.ವೆಂಟಿಲೇಷನ್ 1-2 ಎಕ್ಸಾಸ್ಟ್ ಫ್ಯಾನ್‌ಗಳ ಮೂಲಕ ಗಾಳಿಯ ಸುಲಲಿತ ಸಂಚಾರ ಇರಲಿ..ನೆನಪಿಡಿ, ಹೂ ಬಿಡುವ ಅವಧಿ ಕೇವಲ 53 ದಿನಗಳು ಮಾತ್ರ

2.ವರ್ಟಿಕಲ್ ಫಾರ್ಮಿಂಗ್ ರಾಕ್‌ಗಳು (Racks & Trays)

ಜಾಗ ಉಳಿಸಲು ಮತ್ತು ಹೆಚ್ಚಿನ ಇಳುವರಿ ಪಡೆಯಲು ‘ವರ್ಟಿಕಲ್ ಫಾರ್ಮಿಂಗ್’ ಅತ್ಯುತ್ತಮ.ರಾಕ್‌ಗಳ ಅಳತೆ 6-7 ಅಡಿ ಎತ್ತರ, 4 ಅಡಿ ಉದ್ದ ಮತ್ತು 2 ಅಡಿ ಆಳದ ರಾಕ್‌ಗಳನ್ನು ಬಳಸಿ.ಟ್ರೇಗಳ ಗಾತ್ರ 60 cm × 40 cm × 15 cm ಅಳತೆಯ ಕೈಗಾರಿಕಾ ದರ್ಜೆಯ ಟ್ರೇಗಳು ಸೂಕ್ತ. ಈ ಟ್ರೇಗಳಲ್ಲಿ 20 ರಿಂದ 35 ಕೇಸರಿ ಗಡ್ಡೆಗಳನ್ನು (Corms) ಇಡಬಹುದು.

3.ಕೇಸರಿ ಗಡ್ಡೆಗಳ ಆಯ್ಕೆ ಮತ್ತು ನಾಟಿ

ತಳಿ: ವಾಣಿಜ್ಯವಾಗಿ ಲಾಭದಾಯಕವಾಗಿರುವ ‘Crocus sativus’ ತಳಿಯನ್ನೇ ಆರಿಸಿ.ದೊಡ್ಡ ಗಾತ್ರದ ಗಡ್ಡೆಗಳು ಹೆಚ್ಚು ಹೂವುಗಳನ್ನು ನೀಡುತ್ತವೆ.ಗಡ್ಡೆಗಳ ನಡುವೆ 5-7 ಸೆಂಟಿಮೀಟರ್ ಅಂತರವಿರಲಿ. ಗಡ್ಡೆಯ ಮೇಲ್ಭಾಗ ಯಾವಾಗಲೂ ಒಣಗಿರಬೇಕು, ಕೇವಲ ಬೇರುಗಳಿಗೆ ಮಾತ್ರ ತೇವಾಂಶ ಸಿಗುವಂತಿರಲಿ.

4.ಏರೋಪೋನಿಕ್ಸ್ ಹಾರ್ಡ್‌ವೇರ್ (Aeroponics Hardware)

ಮಣ್ಣಿಲ್ಲದೆ ಬೆಳೆಯಲು ಈ ಕೆಳಗಿನ ಉಪಕರಣಗಳು ಬೇಕು.ಹೈ-ಪ್ರೆಶರ್ ಮಿಸ್ಟಿಂಗ್ ಪಂಪ್: ಇದು ನೀರನ್ನು ಅತೀ ಸಣ್ಣ ಹನಿಗಳಾಗಿ (ಮಂಜಿನಂತೆ) ಸಿಂಪಡಿಸುತ್ತದೆ.
ನೋಝಲ್ಸ್ (Nozzles): ಇವು ಬೇರುಗಳಿಗೆ ಪೋಷಕಾಂಶಯುಕ್ತ ತೇವಾಂಶವನ್ನು ನೀಡುತ್ತವೆ.ಡಿಜಿಟಲ್ ಟೈಮರ್ ಯಾವ ಸಮಯದಲ್ಲಿ ನೀರು ಸಿಂಪಡಿಸಬೇಕು ಎಂದು ಇದು ನಿರ್ಧರಿಸುತ್ತದೆ.

5.ಕೊಯ್ಲು ಮತ್ತು ಸಂಗ್ರಹಣೆ

ಹೂವುಗಳು ನೇರಳೆ ಬಣ್ಣಕ್ಕೆ ಬಂದಾಗ ಅವುಗಳನ್ನು ಕೈಯಾರೆ ಕೊಯ್ಯಬೇಕು. ಪ್ರತಿ ಹೂವಿನಿಂದ ಮೂರು ಕೆಂಪು ಎಳೆಗಳನ್ನು (Stigmas) ಎಚ್ಚರಿಕೆಯಿಂದ ಬೇರ್ಪಡಿಸಿ. ಇವುಗಳನ್ನೇ ನಾವು ಕೇಸರಿ ಎನ್ನುತ್ತೇವೆ. ಸಂಗ್ರಹಿಸಿದ ಎಳೆಗಳನ್ನು ತಕ್ಷಣವೇ ಒಣಗಿಸುವುದರಿಂದ ಅವುಗಳ ಸುವಾಸನೆ ಮತ್ತು ಬಣ್ಣ ದೀರ್ಘಕಾಲ ಉಳಿಯುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular