HomeLatest Newsಕ್ಲೀನಿಂಗ್ ಕೆಲಸಗಳಿಗೂ ಸಹಕಾರಿ ʼಗ್ರೀನ್ ಟೀʼ

ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿ ʼಗ್ರೀನ್ ಟೀʼ

ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಹಾಗೇ ಇದರಿಂದ ಕೂದಲು, ಚರ್ಮ, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳೀಬಹುದು ಮಾತ್ರವಲ್ಲ ಇದು ಕೆಲವು ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿಯಾಗಿದೆ.

* ಮನೆಯ ಕಿಟಕಿ ಮತ್ತು ಕನ್ನಡಿಗಳನ್ನು ಸ್ವಚ್ಛಗೊಳಿಸಲು 1 ಕಪ್ ಗ್ರೀನ್ ಟೀ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಕಿಟಕಿ, ಕನ್ನಡಿಯ ಮೇಲೆ ಸಿಂಪಡಿಸಿ ಪೇಪರ್ ನಿಂದ ಸ್ವಚ್ಛಗೊಳಿಸಿ.

* ಕಾಲುಗಳಲ್ಲಿ ವಾಸನೆ ಬರುತ್ತಿದ್ದರೆ, ಮತ್ತು ಕೊಳಕಾಗಿದ್ದರೆ ಅದನ್ನು ಸ್ವಚ್ಛಗೊಳಿಸಲು ನೀರಿಗೆ ಗ್ರೀನ್ ಟೀಯನ್ನು ಸೇರಿಸಿ ಕುದಿಸಿ ಆ ನೀರಿನಲ್ಲಿ ಕಾಲನ್ನು 15 ನಿಮಿಷ ನೆನೆಸಿಟ್ಟುಕೊಳ್ಳಿ. ಬಳಿಕ ವಾಶ್ ಮಾಡಿದರೆ ಕಾಲುಗಳು ಸ್ವಚ್ಛವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 * ಬಟ್ಟೆಗಳ ಬಣ್ಣ ಮಾಸಿದ್ದರೆ ಅದನ್ನು ಗಾಢವಾಗಿಸಲು ಗ್ರೀನ್ ಟೀ ತಯಾರಿಸಿ ಅದರಲ್ಲಿ ಬಟ್ಟೆಗಳನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಅದನ್ನು ಒಣಗಿಸಿ.

For Latest News Updates, Join Our Whatsapp Community🚩
RELATED ARTICLES

Most Popular