HomeKarnatakaಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳಿಗೆ ಲೋಗೋ ಬಿಡುಗಡೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳಿಗೆ ಲೋಗೋ ಬಿಡುಗಡೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳಿಗೆ ನೂತನ ಲೋಗೋ ಅನಾವರಣಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದು ಹಲವು ದಿನಗಳು ಕಳೆದಿದ್ದು, ಜಿಬಿಎ ಐದು ಪಾಲಿಕೆಗಳಿಗೆ ಚುನಾವಣೆಗೂ ಭಾರಿ ಸಿದ್ಧತೆ ನಡೆಸಲಾಗಿದೆ. ಈ ನಡುವೆ ಐದು ಪಾಲಿಕೆಗಳ ಲೋಗೋ ಅನಾವರಣಗೊಂಡಿದೆ.

ಖಡ್ಗ ಹಿಡಿದಿರುವ ಕೆಂಪೇಗೌಡರ ಚಿತ್ರಣ ಹಾಗೂ ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಗೋಪುರವನ್ನು ಹೊಸ ರೂಪದಲ್ಲಿ ಸಂಯೋಜಿಸಿ ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಬಿಂಬಿಸುವಂತೆ ಲೋಗೋ ಚಿತ್ರಿಸಲಾಗಿದೆ. ಐದು ಪಾಲಿಕೆಗಳಿಗೆ ಐದು ಪ್ರತ್ಯೇಕ ಬಣ್ಣ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2026-27ರ ಸಾಲಿನ ಬಜೆಟ್​ ಮಂಡನೆ ಮಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ 5 ನಗರ ಪಾಲಿಕೆಗಳ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಖಡ್ಗ ಹಿಡಿದು ನಿಂತಿರುವ ಕೆಂಪೇಗೌಡರ ಚಿತ್ರಣ ಲೋಗೋದ ಪ್ರಮುಖ ಆಕರ್ಷಣೆ.

ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವಂತೆ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದ್ದು, ಕೊಂಚ ಹೊಸ ರೀತಿಯಲ್ಲಿ ಬಿಂಬಿಸಲಾಗಿದೆ.

ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.

ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳ ಲೋಗೋವನ್ನು ಚಿತ್ರಕಲಾ ಪರಿಷತ್​ನಿಂದ ಸಿದ್ಧಪಡಿಸಲಾಗಿದೆ. ಮಾರ್ಚ್​​ 20ರಂದು ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ನಡೆದ ಜಿಬಿಎ ಸಭೆಯಲ್ಲಿ ಲೋಗೋವನ್ನು ಅಂತಿಮಗೊಳಿಸಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular