PM ಕಿಸಾನ್ ನಿಧಿಗಾಗಿ ಕಾಯುತ್ತಿರುವ ರೈತರಿಗೆ ಶುಭ ಸುದ್ದಿ. ರೈತರು PM ಕಿಸಾನ್ ಹಣ ಯಾವಾಗ ಖಾತೆಗೆ ಜಮೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿಂದ ರೈತರು ಈ ಆರ್ಥಿಕ ನೆರವನ್ನು ಎದುರು ನೋಡುತ್ತಿದ್ದಾರೆ. ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಅವರು 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದರು.
PM ಕಿಸಾನ್ 23ನೇ ಕಂತು
ನೈಋತ್ಯ ಮುಂಗಾರು ಮಾರುತಗಳು ಪ್ರವೇಶಿಸಿ, ಮಳೆ ಪ್ರಾರಂಭವಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧರಾಗುತ್ತಿದ್ದಾರೆ. ಬೆಳೆಗಳಿಗೆ ಹೂಡಿಕೆ ಮಾಡಲು ಹಣವನ್ನು ಹೊಂದಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು PM ಕಿಸಾನ್ ಯೋಜನೆಯಡಿ ನೀಡುವ ಆರ್ಥಿಕ ನೆರವಿಗಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ. 23ನೇ ಕಂತಿನ ನಿಧಿಯ ಬಿಡುಗಡೆಗೆ ಈಗ ಹಾದಿ ಸುಗಮವಾಗಿದೆ. ಮೋದಿ ಸರ್ಕಾರವು ಯಾವಾಗ ಹಣವನ್ನು ಖಾತೆಗೆ ಜಮೆ ಮಾಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
23ನೇ ಕಂತು ಯಾವಾಗ ?
PM ಕಿಸಾನ್ 22ನೇ ಕಂತನ್ನು ಮಾರ್ಚ್‌ನಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು. ಇದೀಗ 23ನೇ ಕಂತನ್ನು ಜಮೆಯಾಗಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಲಭ್ಯವಿರುವ ಮಾಹಿತಿ ಪ್ರಕಾರ, 23ನೇ ಕಂತನ್ನು ಜುಲೈ ಮಧ್ಯಂತರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸರ್ಕಾರವು ವರ್ಷಕ್ಕೆ ಮೂರು ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣವನ್ನು ಬಿಡುಗಡೆ ಮಾಡುತ್ತದೆ. ಈ ನಿಯಮದ ಪ್ರಕಾರ, ಮಾರ್ಚ್‌ನಲ್ಲಿ 22ನೇ ಕಂತು ಬಿಡುಗಡೆಯಾಗಿದೆ. ಅಲ್ಲಿಂದ ನಾಲ್ಕು ತಿಂಗಳ ನಂತರ, ಅಂದರೆ ಜೂನ್ ಅಂತ್ಯಕ್ಕೆ ಅವಧಿ ಮುಗಿಯುತ್ತದೆ. ಹೀಗಾಗಿ, ಜುಲೈನಲ್ಲಿ 23ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ವಿತರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಅಧಿಕೃತ ಘೋಷಣೆ ಇನ್ನೂ ಹೊರಬೀಳಬೇಕಿದೆ.
ಈ ಕೆಲಸಗಳನ್ನು ಮಾಡದಿದ್ದರೆ ಹಣ ಕಡಿತ
PM ಕಿಸಾನ್ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರೆ, ಸರ್ಕಾರವು e-KYC ಕಡ್ಡಾಯಗೊಳಿಸಿದೆ. ಇದರೊಂದಿಗೆ, ಭೂಮಿಯ ದಾಖಲೆಗಳ ಪರಿಶೀಲನೆ, ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಿಸುವುದು (Aadhaar Seeding), ಬ್ಯಾಂಕ್ KYC ಮತ್ತು NPCI ಲಿಂಕ್ ಅನ್ನು ಪೂರ್ಣಗೊಳಿಸಬೇಕು. ಇವು ಬಾಕಿ ಇದ್ದರೆ ಖಾತೆಗೆ ಹಣ ಬರುವುದಿಲ್ಲ. ಈ ಕೆಲಸಗಳನ್ನು ಮಾಡದ ಫಲಾನುಭವಿಗಳು 23ನೇ ಕಂತಿನ ಹಣ ಬಿಡುಗಡೆಯಾಗುವ ಮುನ್ನವೇ ಪೂರ್ಣಗೊಳಿಸಬೇಕು.
ನೀವು PM ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ನಿಮ್ಮ KYC ಪೂರ್ಣಗೊಂಡಿದೆಯೇ ಅಥವಾ ಆಧಾರ್ ಸೀಡಿಂಗ್ ಆಗಿದೆಯೇ ಎಂಬುದನ್ನು ಅಲ್ಲಿ ತಿಳಿದುಕೊಳ್ಳಬಹುದು. ಯಾವುದಾದರೂ ಬಾಕಿ ಇದ್ದರೆ, ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳಿ. ಜೊತೆಗೆ, PM ಕಿಸಾನ್ ಆಪ್ ಬಳಸಿ ಕೂಡ ನೀವು ಮನೆಯಿಂದಲೇ ಎಲ್ಲಾ ವಿವರಗಳನ್ನು ಚೆಕ್ ಮಾಡಿಕೊಳ್ಳಬಹುದು.

