HomeLatest NewsGOOD NEWS : ನಿವೃತ್ತ ಅಗ್ನಿವೀರರಿಗೆ ಭರ್ಜರಿ ಗುಡ್ ನ್ಯೂಸ್ ; ಸರ್ಕಾರಿ ಉದ್ಯೋಗಗಳಲ್ಲಿ ಶೇ....

GOOD NEWS : ನಿವೃತ್ತ ಅಗ್ನಿವೀರರಿಗೆ ಭರ್ಜರಿ ಗುಡ್ ನ್ಯೂಸ್ ; ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ಘೋಷಣೆ.!

ದೇಶದ ಸಶಸ್ತ್ರ ಪಡೆಗಳನ್ನು ಯುವಶಕ್ತಿಯಿಂದ ಬಲಪಡಿಸುವ ಉದ್ದೇಶದ ‘ಅಗ್ನಿಪಥ’ ಯೋಜನೆ ಈಗ ಹೊಸ ಆಯಾಮ ಪಡೆದುಕೊಂಡಿದೆ. ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಹೊರಬರುವ ‘ಅಗ್ನಿವೀರರ’ ವೃತ್ತಿಜೀವನದ ಭದ್ರತೆಗಾಗಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ಕೇಂದ್ರದ ಐತಿಹಾಸಿಕ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದು, 2027ರಲ್ಲಿ ಮೊದಲ ಬ್ಯಾಚ್‌ನ ಅಗ್ನಿವೀರರು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶಸೇವೆಯ ಶಿಸ್ತು ಮತ್ತು ತರಬೇತಿ ಹೊಂದಿದ ಈ ಯುವಕರನ್ನು ನಾಗರಿಕ ಸೇವೆಗಳಲ್ಲಿ ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.

ಈ ಮಹತ್ತರ ಸೂಚನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಹಿಮಾಚಲ ಪ್ರದೇಶ ಹೊರಹೊಮ್ಮಿದ್ದು, ಉತ್ತರಾಖಂಡ ಸರ್ಕಾರ ಕೂಡ ಶೇ. 20ರಷ್ಟು ಕೋಟಾವನ್ನು ಘೋಷಿಸಿ  ಅಗ್ನಿವೀರರ ಕೈಹಿಡಿಯಲು ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು.    ಅಗ್ನಿಪಥ ಯೋಜನೆಯಡಿಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ 2027ರಲ್ಲಿ ನಿವೃತ್ತರಾಗಲಿರುವ ಅಗ್ನಿವೀರರಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.20ರಷ್ಟು ಮೀಸಲಾತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪತ್ರ ಬರೆದಿದ್ದಾರೆ.

ಕೇಂದ್ರವು ಅಗ್ನಿವೀರರಿಗೆ ಅರಣ್ಯ ರಕ್ಷಕರು, ಗಣಿಗಾರಿಕೆ ರಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ಅಗ್ನಿಶಾಮಕ ಸಿಬ್ಬಂದಿ, ಅಶ್ವಾರೋಹಿ ಪೊಲೀಸರು, ಜೈಲು ವಾರ್ಡನ್‌ಗಳು, ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯಂತಹ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ ನೀಡಲು ತಿಳಿಸಿದೆ.  ಈ ಮಹತ್ತರ ಸೂಚನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಹಿಮಾಚಲ ಪ್ರದೇಶ ಹೊರಹೊಮ್ಮಿದ್ದು, ಉತ್ತರಾಖಂಡ ಸರ್ಕಾರ ಕೂಡ ಶೇ. 20ರಷ್ಟು ಕೋಟಾವನ್ನು ಘೋಷಿಸಿದೆ.

ದೇಶದ ಸಶಸ್ತ್ರ ಪಡೆಗಳನ್ನು ಯುವಶಕ್ತಿಯಿಂದ ಬಲಪಡಿಸುವ ‘ಅಗ್ನಿಪಥ’ ಯೋಜನೆಯಡಿ ಅಗ್ನಿವೀರರ ನೇಮಕಾತಿ ಈಗ ಹೊಸ ಆಯಾಮ ಪಡೆದುಕೊಂಡಿದೆ. ಕೇವಲ ನಾಲ್ಕು ವರ್ಷಗಳ ಸೇವೆಯಲ್ಲದೆ, ಸೇವೆಯ ನಂತರದ ಬದುಕಿಗೂ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2027ರಲ್ಲಿ ಮೊದಲ ಬ್ಯಾಚ್‌ನ ಅಗ್ನಿವೀರರು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ರಾಜ್ಯ ಪೊಲೀಸ್, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಪಡೆಗಳಂತಹ ಪ್ರಮುಖ ಇಲಾಖೆಗಳಲ್ಲಿ ಶೇ. 20ರಷ್ಟು ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ದೇಶಸೇವೆ ಮಾಡಿ ಹೊರಬರುವ ಯುವಕರಿಗೆ ಸರ್ಕಾರಿ ಉದ್ಯೋಗದ ‘ಗ್ಯಾರಂಟಿ’ ನೀಡಲು ಸರ್ಕಾರ ಸಜ್ಜಾಗಿದೆ.”

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular