ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ 31 ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಕಳೆದ ಗುರುವಾರ 29 ಸಾವಿರ ರೂಪಾಯಿ ದಾಟಿದ ಒಂದು ಕ್ವಿಂಟಾಲ್ ಕೊಬ್ಬರಿ ದರ ಸೋಮವಾರ ಇ- ಟೆಂಡರ್ ನಲ್ಲಿ 31,606 ರೂಪಾಯಿಗೆ ಹರಾಜಾಗುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಸೋಮವಾರ 4182 ಕ್ವಿಂಟಾಲ್ ಕೊಬ್ಬರಿ ಮಾರಾಟಕ್ಕೆ ಬಂದಿದೆ. ಕೊಬ್ಬರಿ ಜತೆಗೆ ತೆಂಗಿನ ಕಾಯಿ, ತೆಂಗಿನ ಚಿಪ್ಪು, ಕಾಯಿ ಮಟ್ಟೆ ಕೂಡ ದರ ಕೂಡ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ದರ 70 ರೂಪಾಯಿ ದಾಟಿದ್ದು, ಒಂದು ಟನ್ ಚಿಪ್ಪಿಗೆ 34,000 ರೂ. ತಲುಪಿದೆ. ಕಾಯಿ ಮಟ್ಟೆಯನ್ನು ಸಾವಿರಕ್ಕೆ ಸಾವಿರ ರೂ.ನಂತೆ ತಮಿಳುನಾಡಿನ ಕಡೆಯವರು ಖರೀದಿಸುತ್ತಿದ್ದಾರೆ.