HomeEntertainment25 ದಿನ ಪೂರೈಸಿದ 'ಗ್ರೇ ಗೇಮ್ಸ್'

25 ದಿನ ಪೂರೈಸಿದ ‘ಗ್ರೇ ಗೇಮ್ಸ್’

ಕುತೂಹಲ ಮೂಡಿಸಿದೆ “ಗ್ರೇ ಗೇಮ್ಸ್” ಚಿತ್ರದ ಟೀಸರ್ . – Masth Magaa

ಗಂಗಾಧರ್ ಸಾಲಿಮಠ ನಿರ್ದೇಶನದ ವಿಜಯ್ ರಾಘವೇಂದ್ರ ಅಭಿನಯದ ಗೇಮ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರ ಗಮನ ಸೆಳೆದಿದೆ ಆನ್ಲೈನ್ ಗೇಮಿಂಗ್ ಕುರಿತ ಈ ಸಿನಿಮಾ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು 25 ದಿನಗಳನ್ನು ಪೂರೈಸಿದೆ ಈ ಸಂತಸವನ್ನು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಸೇರಿದಂತೆ ಶೃತಿ ಪ್ರಕಾಶ್, ರವಿ ಭಟ್,  ಭಾವನಾ ರಾವ್ ಅಪರ್ಣ ವಸ್ತಾರೆ ಪ್ರಮುಖ ಪಾತ್ರದಲ್ಲಿದ್ದಾರೆ. ಡೀಸ್ ಫಿಲಂ ಬ್ಯಾನರ್ ನಲ್ಲಿ ಆನಂದ್ ಹೆಚ್ ಮುಘಡ್ ನಿರ್ಮಾಣ ಮಾಡಿದ್ದು, ಡೋಲೇಶ್ವರ್ ರಾಜ್‍ ಸುಂಕು, ಅರವಿಂದ್ ಜೋಶಿ ಮತ್ತು ಸತೀಶ್ ಗ್ರಾಮ ಪುರೋಹಿತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜಗದೀಶ್ ಎನ್ ಸಂಕಲನ, ಟಗರು ರಾಜು ನೃತ್ಯ ನಿರ್ದೇಶನ, ಮತ್ತು ವರುಣ್‍ ಡಿ.ಕೆ ಛಾಯಾಗ್ರಹಣವಿದೆ. ಶ್ರೀಯಂಶ್ ಶ್ರೀರಾಮ್, ಅತ್ರಾಂಗಿ ಫುಂಕಾರ್, ಹಾಗೂ ಅಶ್ವಿನ್ ಹೇಮಂತ್ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular