HomeAgriculture4 ಎಕರೆ ಗುಡ್ಡದಲ್ಲಿ ದ್ರಾಕ್ಷಿ ಬೆಳೆದು ಮಾದರಿ ಆದ ರೈತ: ಬೆನ್ನುತಟ್ಟಿದ ಸಚಿವರು

4 ಎಕರೆ ಗುಡ್ಡದಲ್ಲಿ ದ್ರಾಕ್ಷಿ ಬೆಳೆದು ಮಾದರಿ ಆದ ರೈತ: ಬೆನ್ನುತಟ್ಟಿದ ಸಚಿವರು

ಕರ್ನಾಟಕದಲ್ಲಿ ಸುಮಾರು 9,700 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅಂದಾಜು 1.67 ಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತದೆ. ಬೆಂಗಳೂರು ಸುತ್ತಮುತ್ತ ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದಲ್ಲಿಯೂ ಈಗ ರೈತರು ದ್ರಾಕ್ಷಿ ಬೆಳೆದು ಯಶಸ್ವಿಯಾಗಿದ್ದಾರೆ.

ದ್ರಾಕ್ಷಿ ಬೆಳೆಯಲು ಸಮತಟ್ಟಾದ ಭೂಮಿ ಬೇಕು ಎಂಬ ಮಾತಿದೆ. ಆದರೆ ನೀರಾವರಿಯ ನೆರವಿನಿಂದ ಗುಡ್ಡ ಪ್ರದೇಶದಲ್ಲೂ ದ್ರಾಕ್ಷಿಯನ್ನು ಬೆಳೆದು ಯಶಸ್ವಿಯಾದ ರೈತರೊಬ್ಬರು ಕ್ರಾಂತಿ ಮಾಡಿದ್ದಾರೆ.

ದ್ರಾಕ್ಷಿ ಕೃಷಿಯಲ್ಲಿ ಯಶಸ್ವಿಯಾದ ರೈತನನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಖಾತೆ ಸಚಿವ ಎಂ.ಬಿ. ಪಾಟೀಲ್ ಪರಿಚಯಿಸಿದ್ದಾರೆ. ಈ ರೈತ ಸಚಿವರು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ರೈತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.  4 ಎಕರೆ ಬೆಳೆ, ರೂ. 40-45 ಲಕ್ಷ ಆದಾಯ ನಿರೀಕ್ಷೆ. ಬಬಲೇಶ್ವರ ಮತ ಕ್ಷೇತ್ರದ ಕನಮಡಿ ಗ್ರಾಮದ ರೈತರಾದ ಶ್ರೀ ಬಶೀರ್ ಮುಲ್ಲಾ ಅವರು ಮಹಾರಾಷ್ಟ್ರ ಗಡಿಗೆ ಸಮೀಪವಿರುವ ಅತಿ ಎತ್ತರದ ಧರಿದೇವರ ಗುಡ್ಡದ ಬಳಿ 4 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಈ ವರ್ಷ ಅವರು ರೂ. 40–45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಈ ಎತ್ತರ ಪ್ರದೇಶದಲ್ಲಿಯೂ ನೀರಾವರಿ ಕಲ್ಪಿಸಿರುವುದರಿಂದ ತೋಟಗಾರಿಕೆ ಸಾಧ್ಯವಾಗಿದೆ ಎಂದು ಅವರು ಅಭಿಮಾನದಿಂದ ತಿಳಿಸಿದರು ಎಂದು ತಿಳಿಸಿದ್ದಾರೆ.

ತಾವು ಬೆಳೆದ ದ್ರಾಕ್ಷಿಯನ್ನು ಬೆಂಗಳೂರಿನ ನನ್ನ ನಿವಾಸಕ್ಕೆ ತಂದುಕೊಟ್ಟರು. ಅವರ ಆತ್ಮೀಯತೆಗೆ ಹೃತ್ಪೂರ್ವಕ ಧನ್ಯವಾದಗಳು. ಬಶೀರ್ ಮುಲ್ಲಾ ಅವರ ಕೃಷಿ ಹಾಗೂ ತೋಟಗಾರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದು ನನ್ನ ಹಾರೈಕೆ ಎಂದು ಸಚಿವರು ಹಾರೈಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular