HomeKarnatakaBREAKING : ಗ್ರ್ಯಾನೈಟ್ ಅನ್ ಲೋಡ್ ಮಾಡುವಾಗ ದುರಂತ : ಇಬ್ಬರು ಕಾರ್ಮಿಕರು ದುರ್ಮರಣ

BREAKING : ಗ್ರ್ಯಾನೈಟ್ ಅನ್ ಲೋಡ್ ಮಾಡುವಾಗ ದುರಂತ : ಇಬ್ಬರು ಕಾರ್ಮಿಕರು ದುರ್ಮರಣ

ಉಡುಪಿ: ಗ್ರ್ಯಾನೈಟ್ ಅನ್ ಲೋಡ್ ಮಾಡುವಾಗ ದುರಂತವೊಂದು ಸಂಭವಿಸಿದೆ. ಬೃಹತ್ ಗಾತ್ರದ ಗ್ರ್ಯಾನೈಟ್ ಅನ್ ಲೋಡ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ತೊಟ್ಟಂ ಪ್ರದೇಶದಲ್ಲಿ ನಡೆದಿದೆ.

ಮೃತರಿಬ್ಬರೂ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರಾಗಿದ್ದಾರೆ. ಭಾರಿ ಗಾತ್ರದ ಗ್ರ್ಯಾನೈಟ್ ಅನ್ ಲೋಡ್ ಮಾಡುತ್ತಿದ್ದಾಗ ಕಲ್ಲಿನಡಿ ಸಿಲುಕಿ ಈ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular