HomeLatest NewsSHOCKING: ಖರ್ಚಿಗೆ ದುಡ್ಡು ಕೊಡದ ಅಜ್ಜಿ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಂದ ಮೊಮ್ಮಗ

SHOCKING: ಖರ್ಚಿಗೆ ದುಡ್ಡು ಕೊಡದ ಅಜ್ಜಿ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಂದ ಮೊಮ್ಮಗ

ಕೊಪ್ಪಳ: ಖರ್ಚಿಗೆ 100 ರೂಪಾಯಿಗೆ ಕೊಡದಿದ್ದಕ್ಕೆ ಅಜ್ಜಿ ತಲೆಯ ಮೇಲೆ ಮೊಮ್ಮಗ ರುಬ್ಬುವ ಗುಂಡು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಶುಕ್ರವಾರ ನಡೆದಿದೆ.

ಕನಕಮ್ಮ ನಾಗಪ್ಪ ಬೊಕ್ಕಸದ(82) ಮೃತಪಟ್ಟವರು. ಮೊಮ್ಮಗ ಚೇತನ್ ಕುಮಾರ್(34) ಕೊಲೆ ಆರೋಪಿಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಹಣಕ್ಕಾಗಿ ತಂದೆ, ತಾಯಿ, ಅಜ್ಜಿಯನ್ನು ಚೇತನ್ ಕುಮಾರ್ ಪೀಡಿಸಿದ್ದ. ಹಣಕ್ಕಾಗಿ ಅಜ್ಜಿ ಕನಕಮ್ಮನ ಕೈ ಕಾಲು ಹಿಡಿದಿದ್ದನಾದರೂ ಅವರು ಹಣ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಚೇತನ ಅಜ್ಜಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಕನಕಮ್ಮ ಮೃತಪಟ್ಟಿದ್ದಾರೆ. ಕನಕಗಿರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular