HomeBusinessBIG NEWS: ಇನ್ನು ಮುಂದೆ ಚಿನ್ನದ ಗಟ್ಟಿಗೂ ‘ಹಾಲ್ ಮಾರ್ಕ್’ ಕಡ್ಡಾಯ: ಕೇಂದ್ರ ಸರ್ಕಾರ ಚಿಂತನೆ

BIG NEWS: ಇನ್ನು ಮುಂದೆ ಚಿನ್ನದ ಗಟ್ಟಿಗೂ ‘ಹಾಲ್ ಮಾರ್ಕ್’ ಕಡ್ಡಾಯ: ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಚಿನ್ನದ ಗಟ್ಟಿಗಳಿಗೂ ಹಾಲ್ಮಾರ್ಕ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಭಾರತೀಯ ಕೈಗಾರಿಕಾ ಒಕ್ಕೂಟ ಶುಕ್ರವಾರ ನಡೆಸಿದ ಹರಳು ಮತ್ತು ಆಭರಣ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಈ ಬಗ್ಗೆ ಸುಳಿವು ನೀಡಿದ್ದಾರೆ.

ಚಿನ್ನದ ಗಟ್ಟಿಗೆ ಹಾಲ್ಮಾರ್ಕ್ ಕಡ್ಡಾಯ ಮಾಡುವ ಪ್ರಸ್ತಾಪ ಇಲಾಖೆಯ ಮುಂದಿದೆ. ಆಭರಣ ತಯಾರಕರು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಾರೆ. ಆದರೆ, ಅವರಿಗೆ ಚಿನ್ನದ ಗುಣಮಟ್ಟದ ಬಗ್ಗೆ ಭರವಸೆ ಇರುವುದಿಲ್ಲ. ಈ ವಹಿವಾಟಿನಲ್ಲಿ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2021ರ ಜೂನ್ ನಲ್ಲಿ ಚಿನ್ನದ ಆಭರಣ ಮತ್ತು ಚಿನ್ನದ ಕಲಾಕೃತಿಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ 40 ಕೋಟಿಗೂ ಹೆಚ್ಚು ಚಿನ್ನದ ಆಭರಣಗಳು, ವಿಶಿಷ್ಟ ಹೆಚ್.ಯು.ಐ.ಡಿ. ಜೊತೆ ಹಾಲ್ ಮಾರ್ಕ್ ಹೊಂದಿವೆ. ಇದು ಗ್ರಾಹಕರಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular