HomeIndiaಕಾರ್ಮಿಕರಿಗೆ ಗುಡ್ ನ್ಯೂಸ್: ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ: 2025ರಿಂದ...

ಕಾರ್ಮಿಕರಿಗೆ ಗುಡ್ ನ್ಯೂಸ್: ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ: 2025ರಿಂದ ಜಾರಿ ಸಾಧ್ಯತೆ

ನವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ(ಮಿನಿಮಮ್ ವೇಜ್) ಬದಲಿಗೆ ಜೀವನ ವೇತನ(ಲಿವಿಂಗ್ ವೇಜ್) ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2025ರಿಂದ ಈ ವೇತನ ಬದಲಾವಣೆ ಜಾರಿಗೆ ತರುವ ಸಾಧ್ಯತೆ ಇದೆ.

ಜೀವನ ವೇತನ ಜಾರಿಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ILO)ಯಿಂದ ತಾಂತ್ರಿಕ ಸಹಕಾರ ಪಡೆದು ರೂಪುರೇಷೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಿನಿಮಮ್ ವೇಜ್ ನಲ್ಲಿ ಕಾರ್ಮಿಕರ ಕೆಲಸ, ಉತ್ಪಾದಕತೆ, ಕೌಶಲ ಪರಿಗಣಿಸಿ ವೇತನ ನಿಗದಿ ಮಾಡಲಾಗುತ್ತದೆ. ಲಿವಿಂಗ್ ವೇಜ್ ನಲ್ಲಿ ಮಿನಿಮಮ್ ವೇಜ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ವ್ಯಕ್ತಿಯ ಕನಿಷ್ಠ ಅಗತ್ಯ ಪೂರೈಸಿಕೊಳ್ಳುವಷ್ಟು ವೇತನ ನಿಗದಿಪಡಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆ ನಿರ್ವಹಣೆ, ಆಹಾರ, ಆರೋಗ್ಯ, ಶಿಕ್ಷಣ, ಬಟ್ಟೆ ಸೇರಿ ಕನಿಷ್ಠ ಅಗತ್ಯ ಪೂರೈಸಿಕೊಳ್ಳಲು ವ್ಯಕ್ತಿಗೆ ಕನಿಷ್ಠ ಆದಾಯ ಅತ್ಯಗತ್ಯವಾಗಿದ್ದು, ಇದಕ್ಕೆ ಅನುಗುಣವಾಗಿ ಜೀವನ ವೇತನ ನೀಡಬೇಕೆನ್ನುವುದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವಾದವಾಗಿದೆ. ಮಿನಿಮಮ್ ವೇಜ್ ಗಿಂತಲೂ ಲಿವಿಂಗ್ ವೇಜ್ ಹೆಚ್ಚಾಗಿರುತ್ತದೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular