ದೇಶದ ಜನತೆಗೆ ಗುಡ್ ನ್ಯೂಸ್: ಹೃದ್ರೋಗ, ಬಿಪಿ, ಶುಗರ್ ಸೇರಿ ಇತರೆ ಮಾತ್ರೆ, ಔಷಧಗಳ ದರ ಇಳಿಕೆ

ನವದೆಹಲಿ: ಸಾಮಾನ್ಯವಾಗಿ ಬಳಕೆ ಮಾಡುವ 41 ಔಷಧಗಳು ಹಾಗೂ ಹೃದ್ರೋಗ, ಮಧುಮೇಹ(Diabetes) ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ 6 ಔಷಧೀಯ ಸಂಯೋಜನೆಗಳ ದರವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ.

ಅಲರ್ಜಿ, ಮಧುಮೇಹ, ಹೃದ್ರೋಗ, ಗ್ಯಾಸ್ಟ್ರಿಕ್, ಸಾಮಾನ್ಯ ಸೋಂಕು, ಯಕೃತ್ ಸಂಬಂಧಿತ ಕಾಯಿಲೆಗಳಿಗೆ ಬಳಕೆ ಮಾಡುವ ಔಷಧಗಳ ದರ ಇಳಿಕೆಯಾಗಲಿವೆ. ಇದರೊಂದಿಗೆ ಮಲ್ಟಿ ವಿಟಮಿನ್ ಮಾತ್ರೆಗಳು, ಆಂಟಿಬಯಾಟೆಕ್ ಔಷಧಗಳ ದರ ಕೂಡ ಕಡಿಮೆಯಾಗಲಿದೆ.

ಕೇಂದ್ರ ಸರ್ಕಾರದ ಔಷಧ ಇಲಾಖೆ ಮತ್ತು ರಾಷ್ಟ್ರೀಯ ಔಷದ ದರ ಪ್ರಾಧಿಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ದೇಶದಲ್ಲಿ 10 ಕೋಟಿಗೂ ಅಧಿಕ ಮಧುಮೇಹಿಗಳಿದ್ದು ಸರ್ಕಾರದ ನಿರ್ಧಾರದಿಂದ ಮಾತ್ರೆಗಳು ಮತ್ತು ಇನ್ಸುಲಿನ್ ಮೇಲೆ ಅವಲಂಬಿತರಾದವರಿಗೆ ಅನುಕೂಲವಾಗುತ್ತದೆ.

ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆ ಮಾಡಲು ಬಳಕೆ ಮಾಡುವ ಡೆಪಾಗ್ಲಿಪ್ಲೊಜಿನ್ ಮೆಟ್ ಫೋರ್ಮಿನ್ ಹೈಡ್ರೋಕ್ಲೋರೈಡ್ ಒಂದು ಮಾತ್ರೆಯ ದರ 30 ರೂಪಾಯಿಯಿಂದ 16 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಬಿಪಿ ಕಡಿಮೆ ಮಾಡಲು ಬಳಸುವ ಹೈಡ್ರೋಕ್ಲೊರೋಥೈಯಾಜೈಡ್ ಒಂದು ಮಾತ್ರೆ ದರ 11.07 ರೂ.ನಿಂದ 10.45 ರೂ.ಗೆ ಇಳಿಕೆ ಮಾಡಲಾಗಿದೆ. ಪ್ಯಾರಸಿಟಮಲ್, ಐಬ್ರೂಫಿನ್ ಬೆಲೆಯನ್ನು 1.59 ರೂ.ಗೆ ಇಳಿಕೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read