ಇನ್ನು ಪಡಿತರ ಅಂಗಡಿಯಲ್ಲಿ ಬೇಳೆ, ಡೈರಿ ಉತ್ಪನ್ನ, ಅಗತ್ಯ ವಸ್ತು ಲಭ್ಯ

ನವದೆಹಲಿ: ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ್ ಕೇಂದ್ರಗಳಾಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ.

ಪರಿಷ್ಕರಣೆಗೊಂಡ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ, ಬೇಳೆ ಕಾಳು, ಡೈರಿ ಉತ್ಪನ್ನ, ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಬಹುದಾಗಿತ್ತು. ವಿತರಕರಿಗೆ ಹೊಸ ಆದಾಯದ ಮಾರ್ಗಗಳನ್ನು ಇದು ಕಲ್ಪಿಸುತ್ತದೆ. ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣದ 60 ನ್ಯಾಯಬೆಲೆ ಅಂಗಡಿಗಳನ್ನು ಜನ ಪೋಷಣ್ ಕೇಂದ್ರಗಳಾಗಿ ಪರಿವರ್ತಿಸುವ ಪ್ರಾಯೋಗಿಕ ಯೋಜನೆಗೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳು(FPS) ಕೇವಲ 8-9 ದಿನಗಳವರೆಗೆ ತೆರೆದಿರುತ್ತದೆ. ಆದರೆ, ಇತರರು ಪ್ರತಿ ಮೂರು ತಿಂಗಳಿಗೊಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತಾರೆ. ಉಳಿದ ಸಮಯದಲ್ಲಿ ಈ ಅಂಗಡಿಗಳು ಮುಚ್ಚಲ್ಪಡುತ್ತವೆ. ಎಫ್‌ಪಿಎಸ್ ಡೀಲರ್‌ಗಳಿಗೆ ಅಸ್ತಿತ್ವದಲ್ಲಿರುವ ಕಮಿಷನ್ ರಚನೆಯು ಅಸಮರ್ಪಕವಾಗಿದೆ. ಅಂಗಡಿ ಸ್ಥಳ ಮತ್ತು ಮಾನವಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪರ್ಯಾಯ ವಿಧಾನಗಳ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ಸಚಿವರು ‘ಮೇರಾ ರೇಷನ್’ ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read