ಸಿಮ್ ಬಲ್ಕ್ ಮಾರಾಟ ನಿಷೇಧಿಸಿದ ಸರ್ಕಾರ: ಸಿಮ್ ಡೀಲರ್ ಗಳ ನೋಂದಣಿ, ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ ಡೀಲರ್‌ಗಳ ಪೊಲೀಸ್ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲು ಮತ್ತು ಬೃಹತ್ ಸಂಪರ್ಕ ಕಾರ್ಯವಿಧಾನವನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಗುರುವಾರ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂವಹನ ಸಚಿವ ಅಶ್ವಿನಿ ವೈಷ್ಣವ್, ಎಲ್ಲಾ ಪಾಯಿಂಟ್-ಆಫ್-ಸೇಲ್ ಡೀಲರ್‌ಗಳಿಗೂ ನೋಂದಣಿ ಕಡ್ಡಾಯವಾಗಿರುತ್ತದೆ. ಸೈಬರ್ ವಂಚನೆ, ಮೋಸದ ಕರೆಗಳ ಪರಿಶೀಲಿಸಲು ಮತ್ತು ಬಳಕೆದಾರರನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಂಚಾರ ಸಾಥಿ ಪೋರ್ಟಲ್ ಕುರಿತು ಮಾತನಾಡಿದ ಸಚಿವರು, 52 ಲಕ್ಷ ವಂಚನೆ ಸಂಪರ್ಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ. 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. 300 ಎಫ್‌ಐಆರ್ ದಾಖಲಿಸಲಾಗಿದೆ. 66,000 ವಾಟ್ಸಾಪ್ ಖಾತೆಗಳು ಮತ್ತು 8 ಲಕ್ಷ ಪಾವತಿ ವಾಲೆಟ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read