HomeEntertainmentಅಕ್ಟೋಬರ್ 4 ರಂದು ಬಿಡುಗಡೆಗೆ ಸಜ್ಜಾಗಿದೆ 'ಗೋಪಿಲೋಲ'

ಅಕ್ಟೋಬರ್ 4 ರಂದು ಬಿಡುಗಡೆಗೆ ಸಜ್ಜಾಗಿದೆ ‘ಗೋಪಿಲೋಲ’

ಆರ್ ರವೀಂದ್ರ ನಿರ್ದೇಶನದ ಮಂಜುನಾಥ್ ಅರಸು ಅಭಿನಯದ ಬಹುನಿರೀಕ್ಷಿತ ಗೋಪಿ ಲೋಲ ಚಿತ್ರ ಇತ್ತೀಚಿಗಷ್ಟೇ ತನ್ನ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇದೇ ಅಕ್ಟೋಬರ್ 4ರಂದು ಬಿಡುಗಡೆಗೆ ಸಿದ್ಧವಾಗಿದೆ. ಲವ್ ಸ್ಟೋರಿ ಸೇರಿದಂತೆ ರೈತರ ಕುರಿತ ಸಿನಿಮಾ ಎಂದು ಹೇಳಲಾಗಿದ್ದು, ಇದರ  ಹಾಡುಗಳು ಸಹ ಯೂಟ್ಯೂಬ್ ನಲ್ಲಿ  ಧೂಳ್ ಎಬ್ಬಿಸಿವೆ.

ಈ ಚಿತ್ರದಲ್ಲಿ ಮಂಜುನಾಥ ಅರಸು ಅವರಿಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರು ಅಭಿನಯಿಸಿದ್ದು, ಎಸ್ ನಾರಾಯಣ್, ಸಪ್ತಗಿರಿ (ತೆಲುಗು, ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ), ಜಾಹ್ನವಿ ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಡಿಂಗ್ರಿ ನಾಗರಾಜ್, ರೇಖಾದಾಸ್, ಹನುಮಂತೇಗೌಡ, ಕೆಂಪೇಗೌಡ, ಸಚಿನ್, ರಾಧಾ ರಾಮಚಂದ್ರ, ಮತ್ತು ಸತೀಶ್. ಉಳಿದ ತಾರಾಂಗಣದಲ್ಲಿದ್ದಾರೆ. ಮಿದುನ್ ಅಶೋಕನ್ ಸಂಗೀತ ಸಂಯೋಜನೆ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ಕೇಶವ ಚಂದ್ರ ಸಂಭಾಷಣೆ, ಸೂರ್ಯಕಾಂತ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಮತ್ತು ಜಾನಿ ಅವರ ಸಾಹಸ ನಿರ್ದೇಶನವಿದೆ. ಸುಕೃತಿ ಚಿತ್ರಾಲಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಟ ಮಂಜುನಾಥ್ ಅರಸು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular