HomeKarnatakaಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ: 10 ಕಿ.ಮೀವರೆಗೂ ಟ್ರಾಫಿಕ್ ಜಾಮ್; ವಾಹನ ಸವಾರರ ಪರದಾಟ

ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ: 10 ಕಿ.ಮೀವರೆಗೂ ಟ್ರಾಫಿಕ್ ಜಾಮ್; ವಾಹನ ಸವಾರರ ಪರದಾಟ

ಬೆಂಗಳೂರು: ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ನಾಗವಾರ-ಹೆಬ್ಬಳ ಮಾರ್ಗದ ಕೆಂಪಾಪುರ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಹತ್ತು ಚಕ್ರದ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಕಚೇರಿಗೆ ತೆರಳುವ ವಾಹನ ಸವಾರರು ಹೈರಾಣಾಗಿದ್ದಾರೆ. ಸುಮಾರು 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನಗಳು ರಸ್ತೆಗಳಲ್ಲಿ ನಿಂತಲ್ಲೇ ನಿಂತಿವೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಎರಡು ಜೆಸಿಬಿಗಳು ಆಗಮಿಸಿವೆ. ಲಾರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular