ಮಂಗಳೂರು: ಸಾಅಲು ಸಾಅಲು ಹಬ್ಬಗಳ ಸಂದರ್ಭದಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ನಾಲ್ಕು ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್ ವರೆಗೂ ವಿಸ್ತರಿಸಿದೆ.
ದೂರದೂರುಗಳಿಗೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಕ್ಕೊಮ್ಮೆ ಸಂಚರಿಸುವ ನಾಲ್ಕು ಪ್ರಮುಖ ವಿಶೇಷ ರೈಲುಗಳ ಸೇವೆಯನ್ನು ನವೆಂಬರ್ 2026 ರ ಕೊನೆಯವರೆಗೆ ವಿಸ್ತರಿಸಿದೆ.
ಅಹಮದಾಬಾದ್-ಮಂಗಳೂರು ಜಂಕ್ಷನ್ ಹಾಗೂ ಕಾನ್ಪುರ ಸೆಂಟ್ರಲ್-ಮಧುರೈ ನಡುವಿನ ರೈಲುಗಳ ಸೇವೆ ವಿಸ್ತರಣೆಯಾಗಿದ್ದು, ವಿಸ್ತರಿತ ಅವಧಿಯಲ್ಲಿ ಪ್ರತಿಯೊಂದು ರೈಲು ಒಟ್ಟು 13 ಟ್ರಿಪ್ ಕಾರ್ಯಾಚರಣೆ ನಡೆಸಲಿವೆ.
ಈ ರೈಲುಗಳ ಸಂಚಾರದ ಸಮಯ ಹಾಗೂ ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಅಹಮದಾಬಾದ್ – ಮಂಗಳೂರು ವಿಶೇಷ ರೈಲುಗಳು:
ಗುಜರಾತ್ ಹಾಗೂ ಕರಾವಳಿ ಕರ್ನಾಟಕದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ರೈಲು ಸೇವೆಯು ನವೆಂಬರ್ ಅಂತ್ಯದವರೆಗೆ ಲಭ್ಯವಿರಲಿದೆ.
ರೈಲು ಸಂಖ್ಯೆ 09424 (ಅಹಮದಾಬಾದ್ – ಮಂಗಳೂರು ಜಂಕ್ಷನ್ Special): ಸೆಪ್ಟೆಂಬರ್ 4 ರಿಂದ ನವೆಂಬರ್ 27ರವರೆಗೆ ಪ್ರತಿ ಶುಕ್ರವಾರ ಸಂಚರಿಸಲಿದೆ (ಒಟ್ಟು 13 ಟ್ರಿಪ್‌ಗಳು).
ರೈಲು ಸಂಖ್ಯೆ 09423 (ಮಂಗಳೂರು ಜಂಕ್ಷನ್ – ಅಹಮದಾಬಾದ್ Special): ಸೆಪ್ಟೆಂಬರ್ 5 ರಿಂದ ನವೆಂಬರ್ 28 ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ (ಒಟ್ಟು 13 ಟ್ರಿಪ್‌ಗಳು).
ಕಾನ್ಪುರ – ಮಧುರೈ ವಿಶೇಷ ರೈಲುಗಳು:
ಉತ್ತರ ಪ್ರದೇಶ ಹಾಗೂ ತಮಿಳುನಾಡು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ಸೇವೆ ಅನುಕೂಲಕರವಾಗಲಿದೆ.
ರೈಲು ಸಂಖ್ಯೆ 01925 (ಕಾನ್ಪುರ ಸೆಂಟ್ರಲ್ – ಮಧುರೈ Special): ಸೆಪ್ಟೆಂಬರ್ 2 ರಿಂದ ನವೆಂಬರ್ 25 ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ (ಒಟ್ಟು 13 ಟ್ರಿಪ್‌ಗಳು).
ರೈಲು ಸಂಖ್ಯೆ 01926 (ಮಧುರೈ – ಕಾನ್ಪುರ ಸೆಂಟ್ರಲ್ Special): ಸೆಪ್ಟೆಂಬರ್ 5 ರಿಂದ ನವೆಂಬರ್ 28 ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ (ಒಟ್ಟು 13 ಟ್ರಿಪ್‌ಗಳು).
ಇನ್ನು ಕಾನ್ಪುರ – ಮಧುರೈ ರೈಲುಗಳು (01925/01926): ಮುಂಗಡ ಟಿಕೆಟ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
ಅಹಮದಾಬಾದ್ – ಮಂಗಳೂರು ರೈಲುಗಳು (09424/09423): ಈ ವಿಸ್ತರಿತ ಸೇವೆಯ ಮುಂಗಡ ಬುಕಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ. ಆದ್ದರಿಂದ ಪ್ರಯಾಣಿಕರು ಬುಕಿಂಗ್ ಮಾಡುವ ಮುನ್ನ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನಲ್ಲಿ ಪರಿಶೀಲಿಸಲು ಮನವಿ ಮಾಡಲಾಗಿದೆ.

