GOOD NEWS : ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ‘ಸ್ವಯಂ ಉದ್ಯೋಗ’ ನೇರಸಾಲಕ್ಕಾಗಿ ಅರ್ಜಿ ಆಹ್ವಾನ.!

ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ ಹಾಗೂ ಸ್ವಾವಲಂಭಿ ಸಾರಥಿ-ಫುಡ್ ಕಾರ್ಟ್ ಯೋಜನೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

2024-25ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ, ಸ್ವಾವಲಂಬಿತ ಸಾರಥಿ-ಫುಡ್ ಕಾರ್ಟ್ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ https://sevasindhu.karnataka.gov.in ಆಗಿದೆ.

ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ : ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುವುದು. ಘಟಕ ವೆಚ್ಚ ರೂ.1 ಲಕ್ಷ, ಸಹಾಯಧನ ರೂ. 50 ಸಾವಿರ, ಸಾಲ ರೂ. 50 ಸಾವಿರ.
ಸ್ವಾವಲಂಬಿತ ಸಾರಥಿ-ಫುಡ್ ಕಾರ್ಟ್ : ಸ್ವಾವಲಂಬಿತ ಸಾರಥಿ ಯೋಜನೆಯಡಿ ಫುಡ್‍ಕಾರ್ಟ್ ಉದ್ದೇಶಕ್ಕಾಗಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತ್ರ ಬ್ಯಾಂಕ್‍ಗಳ ಸಹಯೋಗದೊಂದಿಗೆ ಯೋಜನೆ ಅನುಷ್ಟಾನ. ಸಾಲದ ಮೊತ್ತಕ್ಕೆ ಶೇ.75 ರಷ್ಟು ಅಥವಾ ಗರಿಷ್ಟ ರೂ.4 ಲಕ್ಷಗಳ ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಡಿಸೆಂಬರ್, 29 ಕೊನೆಯ ದಿನವಾಗಿದೆ. ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್ https://adcl.karnataka.gov.in ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್‍ಸಿ, ಎಸ್‍ಟಿ ಸಹಾಯವಾಣಿ 9482300400 ನ್ನು ಸಂಪರ್ಕಿಸಬಹುದು.

ಈಗಾಗಲೇ ಅರ್ಜಿ ಸಲ್ಲಿಸಿರುವವರು ಉದ್ದೇಶ ಬದಲಾವಣೆ ಇಚ್ಛಿಸಿದಲ್ಲಿ ನೇರವಾಗಿ ವೆಬ್‍ಸೈಟ್ ವಿಳಾಸ https://swdcorp.karnataka.gov.in/ADCLPortal ನಲ್ಲಿ ಉದ್ದೇಶ ಬದಲಾವಣೆ ಮಾಡಬಹುದಾಗಿರುತ್ತದೆ. ಅಥವಾ ಸಂಬಂಧಿಸಿದ ಜಿಲ್ಲಾ ಕಚೇರಿಗಳಲ್ಲಿ ಮನವಿ ಪತ್ರ ಸಲ್ಲಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read