HomeKarnatakaಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ಅಕ್ಕಿ ಜತೆಗೆ ಜೋಳ ವಿತರಣೆ

ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ಅಕ್ಕಿ ಜತೆಗೆ ಜೋಳ ವಿತರಣೆ

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ಜುಲೈ-2026ರ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆ ಮಾಡಲಾಗುವುದು.

ಎಎವೈ ಪಡಿತರ ಚೀಟಿಯಲ್ಲಿ 1 ರಿಂದ 3 ಸದಸ್ಯರಿರುವ ಪಡಿತರಚೀಟಿಗೆ 14 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 35 ಕೆ.ಜಿ ಆಹಾರಧಾನ್ಯ, 4 ಸದಸ್ಯರಿರುವ ಪಡಿತರ ಚೀಟಿಗೆ 19 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 40 ಕೆ.ಜಿ ಆಹಾರಧಾನ್ಯ, 5 ಸದಸ್ಯರಿರುವ ಪಡಿತರ ಚೀಟಿಗೆ 29 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 50 ಕೆ.ಜಿ ಆಹಾರಧಾನ್ಯ, 6 ಸದಸ್ಯರಿರುವ ಪಡಿತರ ಚೀಟಿಗೆ 39 ಕೆ.ಜಿ ಅಕ್ಕಿ 21 ಕೆ.ಜಿ ಜೋಳ ಒಟ್ಟು 60 ಕೆ.ಜಿ ಆಹಾರಧಾನ್ಯ,  7 ಸದಸ್ಯರಿರುವ ಪಡಿತರ ಚೀಟಿಗೆ 49 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 70 ಕೆ.ಜಿ ಆಹಾರಧಾನ್ಯ ಹಾಗೂ  8 ಸದಸ್ಯರಿರುವ ಪಡಿತರ ಚೀಟಿಗೆ 59 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 80 ಕೆ.ಜಿ ಆಹಾರಧಾನ್ಯ ವಿತರಣೆ ಮಾಡಲಾಗುವುದು.

9 ಮತ್ತು ಹೆಚ್ಚಿನ ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ ಇದೇ ಅನುಪಾತದಲ್ಲಿ ಸದಸ್ಯರ ಅನುಗುಣವಾಗಿ ಪಡಿತರ ವಿತರಣೆ ಮಾಡಲಾಗುವುದು. ಕೇಂದ್ರ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 7 ಕೆ.ಜಿ ಅಕ್ಕಿ 3 ಕೆ.ಜಿ ಜೋಳ ರಂತೆ ಆಹಾರಧಾನ್ಯ ನೀಡಲಾಗುವುದು. ರಾಜ್ಯ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿಯಂತೆ ಆಹಾರಧಾನ್ಯ ವಿತರಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular