HomeLatest Newsರಾಜ್ಯ ಸರ್ಕಾರದಿಂದ 'ವಾಲ್ಮೀಕಿ' ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ 'ಸಾಲ ಸೌಲಭ್ಯ'ಕ್ಕೆ ಅರ್ಜಿ...

ರಾಜ್ಯ ಸರ್ಕಾರದಿಂದ ‘ವಾಲ್ಮೀಕಿ’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ‘ಸಾಲ ಸೌಲಭ್ಯ’ಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ಧಿ ನಿಗಮದಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸಲು ಪರಿಶಿಷ್ಟ ಪಂಗಡ ಸಾಮಾನ್ಯ ನಿರುದ್ಯೋಗಿ ಯುವಕ, ಯವತಿಯರಿಗಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ವಿವಿಧ ಯೋಜನೆಗಳ ವಿವರ: ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (ಘಟಕ ವೆಚ್ಚ ರೂ. 1,00,000 ಅದರಲ್ಲಿ ಶೇ. 50ರಷ್ಟು ಸಹಾಯಧನ ಮತ್ತು ಶೇ. 50ರಷ್ಟು ನಿಗಮದಿಂದ ನೇರ ಸಾಲವಾಗಿರುತ್ತದೆ).

ಉದ್ಯಮ ಶೀಲತಾ ಅಭಿವೃದ್ಧಿ ಹೈನುಗಾರಿಕೆ ಯೋಜನೆ (ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ ರೂ.1,25,000 ಸಹಾಯಧನ ಉಳಿದ ಮೊತ್ತ ಬ್ಯಾಂಕ ಸಾಲವಾಗಿರುತ್ತದೆ).
ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ ಇತರ ಉದ್ದೇಶಕ್ಜಾಗಿ (ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಟ ರೂ.2,00,000 ಸಹಾಯಧನ ಉಳಿದ ಮೊತ್ತ ಬ್ಯಾಂಕ ಸಾಲವಾಗಿರುತ್ತದೆ).
ಉದ್ಯಮ ಶೀಲತಾ ಅಭಿವೃದ್ದಿ ಸ್ವಾವಲಂಬಿ ಸಾರಥಿ ಯೋಜನೆ (ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ ರೂ.4,00,000 ಸಹಾಯಧನ ಉಳಿದ ಮೊತ್ತ ಬ್ಯಾಂಕ ಸಾಲವಾಗಿರುತ್ತದೆ).
ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ (ಸಂಘದ ಪ್ರತಿ ಸದಸ್ಯರಿಗೆ ಸಹಾಯಧನ ರೂ.25,000 ಮತ್ತು ಸಾಲ ರೂ. 25,000 ಒಟ್ಟು ರೂ. 50,000 ಗಳಾಗಿದೆ).
ಗಂಗಾ ಕಲ್ಯಾಣ ಯೋಜನೆ (ಸಣ್ಣ ಮತ್ತು ಅತಿ ಸಣ್ಣ ರೈತರ ಖುಷ್ಕಿ ಜಮೀನಿಗೆ ಕೊಳವೆ ಬಾವಿ ನೀರಾವೆರಿ ಸೌಲಭ್ಯ ಕಲ್ಪಿಸುವುದು).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂ ಒಡೆತನ ಯೊಜನೆ (ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಕನಿಷ್ಠ 0,20 ಎಕರೆ ಗರಿಷ್ಠ ಘಟಕ ವೆಚ್ಚದಲ್ಲಿ ಎಷ್ಟು ಬರುತ್ತೊ ಅಷ್ಟು ಜಮೀನು ಖರೀದಿಸಿ ಕೊಡುಲಾಗುವುದು)
ಆಸಕ್ತರು ಗ್ರಾಮಒನ್, ಬೆಂಗಳೂರು ಒನ್, ಹುಬ್ಬಳ್ಳಿ ಧಾರವಾಡ ಒನ್ ಅಥವಾ ಕರ್ನಾಟಕಾ ಒನ್ ಕೇಂದ್ರಗಳಲ್ಲಿ https://sevasindhu.karnataka.gov,in ವೆಬ್ಸೈಟ್ ಮೂಲಕ ಸಪ್ಟೆಂಬರ 17, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ ಸಹಾಯವಾಣಿ ಸಂಖ್ಯೆ: 9482-300-400 ಹಾಗೂ ನಿಗಮದ ವೆಬ್ಸೈಟ್ ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular