ಬೆಂಗಳೂರು : ರಾಜ್ಯದ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಹಾಗೂ ಕಾರ್ಮಿಕರ ಕೌಶಲಾಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಂಡಳಿಯು, ಶೈಕ್ಷಣಿಕ ಸಹಾಯಧನದ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೋರ್ಸ್‌ವಾರು ಸಿಗುವ ಸಹಾಯಧನ ಹೀಗಿದೆ: ಒಂದನೇ ತರಗತಿಯಿಂದ ಹಿಡಿದು ಪಿಹೆಚ್‌ಡಿ ಹಾಗೂ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಲ್ಲಿ (IIT, AIIMS) ಓದುತ್ತಿರುವ ಮಕ್ಕಳಿಗೆ ವಾರ್ಷಿಕವಾಗಿ ಸಹಾಯಧನ ನೀಡಲಾಗುತ್ತಿದೆ. ಕನಿಷ್ಠ 1,800 ರೂ.ನಿಂದ ಗರಿಷ್ಠ 60,000 ರೂ. ವರೆಗೆ ವಿದ್ಯಾರ್ಥಿವೇತನ ಲಭ್ಯವಿದೆ.
ಶಾಲಾ ಶಿಕ್ಷಣ: 1 ರಿಂದ 10ನೇ ತರಗತಿಯವರೆಗೆ ಓದುವ ಮಕ್ಕಳಿಗೆ 1,800 ರಿಂದ 3,000 ರೂ. ಸಹಾಯಧನ.
ಪದವಿ ಹಾಗೂ ವೃತ್ತಿಪರ ಶಿಕ್ಷಣ: ಬಿಎ, ಬಿಕಾಂ ಅಂತಹ ಸಾಮಾನ್ಯ ಪದವಿಗಳಿಗೆ 15,000 ರೂ. ಹಾಗೂ ವೈದ್ಯಕೀಯ ಅಥವಾ ತಾಂತ್ರಿಕ ವೃತ್ತಿಪರ ಕೋರ್ಸ್‌ಗಳಿಗೆ 25,000 ದಿಂದ 35,000 ರೂ. ವರೆಗೆ ಧನಸಹಾಯ ನೀಡಲಾಗುತ್ತದೆ.
ರಾಷ್ಟ್ರೀಯ ಸಂಸ್ಥೆಗಳು: ಐಐಟಿ, ಏಮ್ಸ್ ಅಥವಾ ಐಐಎಸ್‌ಸಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 60,000 ರೂ.ಗಳವರೆಗೆ ನೆರವು ಸಿಗಲಿದೆ.
ಇತರೆ ಪ್ರಮುಖ ಸೌಲಭ್ಯಗಳು: ಮಕ್ಕಳ ಶಿಕ್ಷಣದ ಜೊತೆಗೆ ಕಾರ್ಮಿಕರ ಹಿತರಕ್ಷಣೆಗಾಗಿ 41 ಶ್ರಮಿಕ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆಗಾಗಿ ‘ಸುರಕ್ಷತಾ ಕಿಟ್’ ಹಾಗೂ ಸ್ವಯಂ ಉದ್ಯೋಗಕ್ಕೆ ಪೂರಕವಾಗಿ 20,000 ರೂ. ಮೌಲ್ಯದ ‘ಟ್ರೈನಿಂಗ್-ಕಮ್-ಟೂಲ್‌ಕಿಟ್ಸ್’ಗಳನ್ನು ಸಹ ವಿತರಿಸಲಾಗುತ್ತಿದೆ. ನೋಂದಾಯಿತ ಕಾರ್ಮಿಕರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.
| ಕ್ರ. ಸಂ | ಕೋರ್ಸ್/ತರಗತಿ | ತರಗತಿ/ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ) | ಸ್ನಾತಕೋತ್ತರ ಪದವಿ (ಪ್ರತಿ ವರ್ಷಕ್ಕೆ) (ರೂ.ಗಳಲ್ಲಿ) |
| 1 | 1ನೇ ತರಗತಿಯಿಂದ 5ನೇ ತರಗತಿ | 1,800/- | – |
| 2 | 6ನೇ ತರಗತಿಯಿಂದ 8ನೇ ತರಗತಿ | 2,400/- | – |
| 3 | 9 ಮತ್ತು 10ನೇ ತರಗತಿ | 3,000/- | – |
| 4 | ಪಿಯುಸಿ, 11 ಹಾಗೂ 12ನೇ ತರಗತಿ ಅಥವಾ ತತ್ಸಮಾನ ಕೋರ್ಸ್ | 6,000/- | – |
| 5 | 10ನೇ ತರಗತಿ ನಂತರದ ಐಟಿಐ/ತತ್ಸಮಾನ ತಾಂತ್ರಿಕ ಕೋರ್ಸ್‌ಗಳು | 10,000/- | – |
| 6 | ಪಿಯುಸಿ ನಂತರದ ಯಾವುದೇ ಡಿಪ್ಲೋಮಾ ತರಗತಿ | 12,000/- | – |
| 7 | ಸಾಮಾನ್ಯ ಪದವಿ (ಜನರಲ್ ಡಿಗ್ರಿ) – ಬಿಎ, ಬಿಕಾಂ, ಬಿಎಸ್ಸಿ ಮುಂತಾದವುಗಳು | 15,000/- | 20,000/- |
| 8 | 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ Vocational ವೃತ್ತಿಪರ ಕೋರ್ಸ್‌ಗಳು ಕಾನೂನು ಪದವಿ ಸಹಿತ (Professional Courses) | 20,000/- | 25,000/- |
| 9 | ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ತಾಂತ್ರಿಕ ವೃತ್ತಿಪರ ಕೋರ್ಸ್‌ಗಳು (Professional Courses) | 25,000/- | 35,000/- |
| 10 | 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಅರೆ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳು (Para Medical Courses) | 20,000/- | 25,000/- |
| 11 | 03 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳು (Professional Courses) | 25,000/- | 35,000/- |
| 12 | ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಸಮನಾದ ಕಾನೂನು ವಿದ್ಯಾ ಸಂಸ್ಥೆಗಳು | 40,000/- | 50,000/- |
| 13 | ಪಿಹೆಚ್‌ಡಿ/ಎಂಫಿಲ್ (03 ವರ್ಷ ಅವಧಿಯವರೆಗೆ) | 40,000/- | – |
| 14 | IIT, IIIT, AIIMS, IISc, IISERC ನಂತಹ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾ ಸಂಸ್ಥೆಗಳು | 50,000/- | 60,000/- |


