HomeKarnatakaBIG NEWS : ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : 'PUC' ಪ್ರವೇಶಾತಿಗೆ ದಿನಾಂಕ ವಿಸ್ತರಣೆ

BIG NEWS : ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘PUC’ ಪ್ರವೇಶಾತಿಗೆ ದಿನಾಂಕ ವಿಸ್ತರಣೆ

ಬೆಂಗಳೂರು  : ಪ್ರಸಕ್ತ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್‌ 30ರವರೆಗೆ ವಿಸ್ತರಿಸಿದೆ.

ಯಾವುದೇ ದಂಡವಿಲ್ಲದೇ  ಪ್ರವೇಶ  ಪಡೆಯಲು ಜೂನ್ 30, ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಜು.10ರವರೆಗೆ ಹಾಗೂ ದಂಡ ಶುಲ್ಕ ಪಾವತಿಸಿ ಜು.20ರವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಿದೆ.ಈ ಮೊದಲು ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜೂ.15 ಕೊನೆಯ ದಿನವಾಗಿತ್ತು. ದಂಡ ಶುಲ್ಕದೊಂದಿಗೆ ದಾಖಲಾತಿಗೆ ಜೂ.22ರವರೆಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್‌ 30ರವರೆಗೆ ವಿಸ್ತರಿಸಿದೆ.

ಜೂ.30ರ ನಂತರ  ಜು.10ರವರೆಗೆ ಪ್ರವೇಶ ಪಡೆಯುವವರಿಗೆ  670 ರು. ದಂಡ ಶುಲ್ಕದೊಂದಿಗೆ ಹಾಗೂ ಜು.10ರ ನಂತರ ಜು.20ರವರೆಗೆ ಪ್ರವೇಶ ಪಡೆಯುವವರಿಗೆ 2890 ರು. ವಿಶೇಷ ದಂಡ ಶುಲ್ಕದೊಂದಿಗೆ ದಾಖಲಾತಿ ಪಡೆಯಲು ಅವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular