HomeLive Newsಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ಆನ್‌ ಲೈನ್‌ ನಲ್ಲಿ ಇ-ಖಾತೆ ಪಡೆಯಲು ಅವಕಾಶ

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ಆನ್‌ ಲೈನ್‌ ನಲ್ಲಿ ಇ-ಖಾತೆ ಪಡೆಯಲು ಅವಕಾಶ

ಆಸ್ತಿ ಮಾಲೀಕರಿಗೆ ಇ-ಖಾತೆ ಪಡೆಯುವುದನ್ನು ಸರ್ಕಾರ ಸರಳೀಕರಿಸಿದ್ದು, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಪೂರಕ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಹಾಜರುಪಡಿಸಿ ಸದರಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆನ್‌ಲೈನ್‌ನಲ್ಲಿ ಇ-ಖಾತೆ ಪಡೆಯಬಹುದಾಗಿದೆ.

ಅಗತ್ಯ ದಾಖಲಾತಿಗಳಾದ ಮಾಲೀಕರ ಭಾವಚಿತ್ರ, ಆಸ್ತಿಯ ಕಟ್ಟಡ/ನಿವೇಶನದ ಜಿ.ಪಿ.ಎಸ್. ಛಾಯಾಚಿತ್ರ, ಪ್ರಸ್ತುತ ಸಾಲಿನವರೆಗೆ ಪಾವತಿಸಿರುವ ಆಸ್ತಿ, ನೀರಿನ, ಯು.ಜಿ.ಡಿ, ಘನತ್ಯಾಜ್ಯ ಹಾಗೂ ಇತರೆ ಚಲನ್ ಪ್ರತಿಗಳು, ವಿದ್ಯುತ್ ಆರ್.ಆರ್.ಸಂಖ್ಯೆ, ಸ್ವತ್ತಿನ ನೋಂದಾಯಿತ ದಾಖಲಾತಿಗಳು ಇ.ಸಿ, ನಮೂನೆ-15 ಮತ್ತು 16, ಮಾಲೀಕರ ಆಧಾರ್ ಕಾರ್ಡ್, ಪಾನ್‌ಕಾಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಮಾಲೀಕರ ದೂರವಾಣಿ ಸಂಖ್ಯೆ, ಆಸ್ತಿಯ ಭೂಪರಿವರ್ತನಾ ಆದೇಶ, ಅನುಮೋದಿತ ಲೇಔಟ್ ನಕ್ಷೆ ಪ್ರತಿ, ಕಟ್ಟಡ ಪರವಾನಗಿ ಪ್ರತಿ ಹಾಗೂ ಸ್ವತ್ತಿಗೆ ಸಂಬAದಿಸಿದ ಇತರ ಪೂರಕ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಹಾಜರುಪಡಿಸಿ ಸದರಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆನ್‌ಲೈನ್‌ನಲ್ಲಿ ಇ-ಖಾತೆ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ www.eaasthi.karnataka.gov.in ಸಹಾಯವಾಣಿ ಸಂಖ್ಯೆ:7259585959 ರ ಮೂಲಕ ಸಂಪರ್ಕಿಸಬಹುದಾಗಿದೆ. ಸದರಿ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ಹಾಸನ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular