ಬೆಂಗಳೂರು: ಸಾರಿಗೆ ಬಸ್ ಗಳ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೈಗಾರಿಕೆಗಳಿಗೆ ಪೂರೈಸುವ ಡೀಸೆಲ್ ದರ ಮಾತ್ರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಸದ್ಯ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧದ ಪರಿಣಾಮ ಸಾರಿಗೆ ನಿಗಮಗಳ ಮೇಲೂ ಆಗಿದೆ. ಯುದ್ಧದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಅದು ತಾತ್ಕಾಲಿಕ ಎನ್ನುವ ಅಭಿಪ್ರಾಯವಿದೆ. ಕೈಗಾರಿಕೆಗಳ ಡೀಸೆಲ್ ಬೆಲೆ ತಾತ್ಕಾಲಿಕ ಹೆಚ್ಚಳದಿಂದ ಬಸ್ ಪ್ರಯಾಣ ದರ ಏರಿಕೆ ಮಾಡಲು ಆಗುವುದಿಲ್ಲ. ಕೈಗಾರಿಕಾ ಡೀಸೆಲ್ ದರ ಏರಿಕೆ ಸಾರಿಗೆ ಸಂಸ್ಥೆಗೆ ಅನ್ವಯವಾಗಲ್ಲ. ಹಾಗಾಗಿ ಸದ್ಯ ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಸಾರಿಗೆ ಬಲ್ಕ್ ಡೀಸೆಲ್ ದರ ಹೆಚ್ಚಿಸಿದರೆ ನಾಲ್ಕು ನಿಗಮಗಳ ಮೇಲೆ ನಿತ್ಯ ಸುಮಾರು 3.60 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಹೇಳಲಾಗಿದೆ.

