
ಮಾನ್ಯತೆ ಪಡೆದ ಕೇಂದ್ರಗಳೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ (ಪುರುಷರು ಮತ್ತು ಮಹಿಳೆಯರು) ಪ್ರಮಾಣೀಕರಣ ಕೋರ್ಸ್, ಹೆವಿ ಅರ್ಥ್ ಮೂವರ್ ತರಬೇತಿ (ಜೆಸಿಬಿ, ಕ್ರೇನ್, ಪೋಕ್ ಲೇನ್ ಸೇರಿದಂತೆ ಭಾರಿ ವಾಹನ ಚಾಲನಾ ತರಬೇತಿ), ಶಾರ್ಟ್ ಹ್ಯಾಂಡ್ ಟ್ರೈನಿಂಗ್ ಮತ್ತು ಭದ್ರತಾ ಸೇವೆಗಳ ತರಬೇತಿ ನೀಡಲಾಗುವುದು.
ಅರ್ಜಿದಾರರು ವಯಮೋತಿ 18 ರಿಂದ 35 ವರ್ಷದೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಯು ಕಡ್ಡಾಯವಾಗಿ ತರಬೇತಿಯನ್ನು ಪೂರ್ಣಗೊಳಿಸರಬೇಕು. ಅಭ್ಯರ್ಥಿಯು ಬೇರೆ ಯಾವುದೇ ಸರ್ಕಾರದ ವತಿಯಿಂದ ವೃತ್ತಿ ಪರ ತರಬೇತಿಯನ್ನು ಪಡೆದಿರಬಾರದು. ಆಸಕ್ತರು ವೆಬ್ ಸೈಟ್ https://kmdconline.karnataka.gov.in ನಲ್ಲಿ ಅರ್ಜಿಗಳನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಬೆಂಗಳೂರು ನಗರ ಜಿಲ್ಲೆ (ಕೇಂದ್ರಿಯ ವಿಭಾಗ), ಕೊಠಡಿ ಸಂಖ್ಯೆ ಎಫ್ ಎಫ್ -29/37, 1ನೇ ಮಹಡಿ, ಹಮೀದ್ ಷಾ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೊಲೀಸ್ ಠಾಣೆ ಹತ್ತಿರ, ಕಬ್ಬನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು -02 ಅಥವಾ ದೂರವಾಣಿ ಸಂಖ್ಯೆ: 080-22114815, ಸಹಾಯವಾಣಿ ಸಂಖ್ಯೆ: 8277799990 (24/7) ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಕೇಂದ್ರಿಯ ವಿಭಾಗ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

