HomeLatest News'LPG' ಬಳಕೆದಾರರಿಗೆ ಗುಡ್ ನ್ಯೂಸ್ : 5 ಕೆಜಿ ಸಿಲಿಂಡರ್ ವಾಪಸ್ ಕೊಟ್ಟರೆ ₹500 ನಿಮ್ಮ...

‘LPG’ ಬಳಕೆದಾರರಿಗೆ ಗುಡ್ ನ್ಯೂಸ್ : 5 ಕೆಜಿ ಸಿಲಿಂಡರ್ ವಾಪಸ್ ಕೊಟ್ಟರೆ ₹500 ನಿಮ್ಮ ಖಾತೆಗೆ..!

ಅಡುಗೆ ಅನಿಲ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಅನುಕೂಲಕರ ಸೌಲಭ್ಯ ಲಭ್ಯವಾಗಿದೆ. 5 ಕೆಜಿ ‘ಛೋಟು’ ಎಲ್‌ಪಿಜಿ ಸಿಲಿಂಡರ್‌ನ್ನು ಖರೀದಿಸಿ ಬಳಿಕ ಯಾವುದೇ ಸಮಯದಲ್ಲಿ ಹಿಂತಿರುಗಿಸಿದರೆ ₹500 ರಿಫಂಡ್ ದೊರೆಯುತ್ತದೆ. ಸ್ಥಳೀಯ ವಿಳಾಸದ ದಾಖಲೆ ಅಗತ್ಯವಿಲ್ಲದ ಈ ಸಿಲಿಂಡರ್ ಉದ್ಯೋಗಿಗಳು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಹಾಗೂ ಸಣ್ಣ ಕುಟುಂಬಗಳಿಗೆ ಹೆಚ್ಚು ಉಪಯುಕ್ತವಾಗಿದೆ.

ದೇಶದಲ್ಲಿ ಸಾಮಾನ್ಯವಾಗಿ ಮನೆಗಳಲ್ಲಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸಲಾಗುತ್ತದೆ. ವಾಣಿಜ್ಯ ಬಳಕೆಗೆ 19 ಕೆಜಿ ಸಿಲಿಂಡರ್‌ಗಳೂ ಲಭ್ಯವಿವೆ. ಆದರೆ ಇತ್ತೀಚಿನ ದಿನಗಳಲ್ಲಿ 5 ಕೆಜಿ ಸಾಮರ್ಥ್ಯದ ‘ಛೋಟು ಎಲ್‌ಪಿಜಿ ಸಿಲಿಂಡರ್’ ಹೆಚ್ಚು ಜನಪ್ರಿಯವಾಗುತ್ತಿದೆ. ಇದನ್ನು ಬಳಸುವವರಿಗೆ ಹಲವು ವಿಶೇಷ ಸೌಲಭ್ಯಗಳಿದ್ದು, ಸಿಲಿಂಡರ್ ಹಿಂತಿರುಗಿಸಿದರೆ ₹500 ರಿಫಂಡ್ ಕೂಡ ದೊರೆಯುತ್ತದೆ.

ಅಮೆರಿಕಾ-ಇರಾನ್ ಸಂಘರ್ಷದ ವೇಳೆ ಎಲ್‌ಪಿಜಿ ಬೆಲೆ ಏರಿಕೆ ಮತ್ತು ಸರಬರಾಜಿನ ವ್ಯತ್ಯಯದಿಂದ ಗೃಹ ಹಾಗೂ ವಾಣಿಜ್ಯ ಬಳಕೆದಾರರಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಸಾಮರ್ಥ್ಯದ ‘ಛೋಟು’ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಚಯಿಸಿತು. ಇದೀಗ ಈ ಸಿಲಿಂಡರ್‌ಗಳಿಗೆ ಉತ್ತಮ ಬೇಡಿಕೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯೋಗಿಗಳು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಕಡಿಮೆ ಪ್ರಮಾಣದಲ್ಲಿ ಗ್ಯಾಸ್ ಬಳಸುವ ಕುಟುಂಬಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಈ 5 ಕೆಜಿ ಸಿಲಿಂಡರ್ ಅತ್ಯಂತ ಉಪಯುಕ್ತವಾಗಿದೆ. ಇದನ್ನು ಪಡೆಯಲು ಸ್ಥಳೀಯ ವಿಳಾಸದ ದಾಖಲೆ (Local Address Proof) ಅಗತ್ಯವಿಲ್ಲ. ಯಾವುದೇ ಮಾನ್ಯ ಗುರುತಿನ ಚೀಟಿ ನೀಡಿದರೆ ಸಾಕು.ಈ ಸಿಲಿಂಡರ್‌ಗಳನ್ನು ಪೆಟ್ರೋಲ್ ಬಂಕ್‌ಗಳು, ಕಿರಾಣಿ ಅಂಗಡಿಗಳು, ಸ್ಥಳೀಯ ಸೂಪರ್ ಮಾರ್ಕೆಟ್‌ಗಳು ಹಾಗೂ ಅಧಿಕೃತ ಗ್ಯಾಸ್ ವಿತರಕರಿಂದ ಖರೀದಿಸಬಹುದು. ಮುಂಗಡ ಬುಕ್ಕಿಂಗ್ ಅಗತ್ಯವಿಲ್ಲ. ಬೇರೆ ನಗರ ಅಥವಾ ಪಟ್ಟಣಕ್ಕೆ ಸ್ಥಳಾಂತರವಾದರೂ ಅಲ್ಲಿನ ಅಧಿಕೃತ ಮಾರಾಟ ಕೇಂದ್ರಗಳಲ್ಲಿ ಸುಲಭವಾಗಿ ರಿಫಿಲ್ ಮಾಡಿಸಬಹುದು.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ಅಧಿಕೃತ ಮಾರಾಟ ಕೇಂದ್ರದಿಂದ ಖರೀದಿಸಿದ 5 ಕೆಜಿ ‘ಛೋಟು’ ಸಿಲಿಂಡರ್ ಅನ್ನು ಯಾವಾಗ ಬೇಕಾದರೂ ಹಿಂತಿರುಗಿಸಬಹುದು. ಸಿಲಿಂಡರ್ ಅನ್ನು ಎಷ್ಟು ವರ್ಷ ಬಳಸಿದ್ದರೂ ಹಿಂತಿರುಗಿಸುವ ವೇಳೆ ಪ್ರತಿ ಸಿಲಿಂಡರ್‌ಗೆ ₹500 ರಿಫಂಡ್ ನೀಡಲಾಗುತ್ತದೆ.

ಈ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಂಡೇನ್, HP ಗ್ಯಾಸ್ ಮತ್ತು ಭಾರತ್ ಗ್ಯಾಸ್ ಕಂಪನಿಗಳು ದೇಶಾದ್ಯಂತ ಲಭ್ಯವಾಗುವಂತೆ ಮಾಡಿವೆ. ಸಾಮಾನ್ಯ ಎಲ್‌ಪಿಜಿ ಸಂಪರ್ಕಕ್ಕೆ ಏಜೆನ್ಸಿಯಲ್ಲಿ ಸ್ಥಳೀಯ ವಿಳಾಸದ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದ್ದರೂ, ಈ 5 ಕೆಜಿ ಸಿಲಿಂಡರ್ ಪಡೆಯಲು ಅಂತಹ ನಿಯಮ ಇರುವುದಿಲ್ಲ. ಇದೇ ಕಾರಣಕ್ಕೆ ಈ ಸಿಲಿಂಡರ್‌ಗಳು ಜನಪ್ರಿಯತೆ ಗಳಿಸುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular