HomeKarnatakaಕನ್ನಡಿಗರಿಗೆ ಗುಡ್ ನ್ಯೂಸ್ ; ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು 'ಸಹಾಯಕ ಲೋಕೋ ಪೈಲಟ್ ಮುಂಬಡ್ತಿ' ಪರೀಕ್ಷೆ!

ಕನ್ನಡಿಗರಿಗೆ ಗುಡ್ ನ್ಯೂಸ್ ; ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು ‘ಸಹಾಯಕ ಲೋಕೋ ಪೈಲಟ್ ಮುಂಬಡ್ತಿ’ ಪರೀಕ್ಷೆ!

ಬೆಂಗಳೂರು : ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕನ್ನಡದಲ್ಲಿ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆ ಬರೆಯಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.

ಈ ಬಗ್ಗೆ ರೈಲ್ವೇ ಸಚಿವ ವಿ ಸೋಮಣ್ಣ ಟ್ವೀಟ್ ಮಾಡಿದ್ದು, ನನ್ನ ಸೂಚನೆಯ ಮೇರೆಗೆ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ (Promotional) ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರದಿಂದ ಪ್ರತಿಭಾವಂತ ಕನ್ನಡಿಗ ಉದ್ಯೋಗಿಗಳಿಗೆ ರೈಲ್ವೆಯಲ್ಲಿ ಮತ್ತಷ್ಟು ಹೆಚ್ಚಿನ ಅವಕಾಶಗಳು ದೊರಕಲಿವೆ ಎಂಬ ಭರವಸೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಇಲಾಖೆಗಳಲ್ಲಿ ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ನೈಋತ್ಯ ರೈಲ್ವೆಯು ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಅಧಿಸೂಚನೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular