HomeKarnatakaJOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಹೊರಗುತ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ

JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಹೊರಗುತ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಮ್) ಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಮೇರೆಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

1. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು (ಹುದ್ದೆ-1) ವಿದ್ಯಾರ್ಹತೆ: ವಿಜ್ಞಾನ/ ಗ್ರಾಮೀಣ ಅಭಿವೃದ್ಧಿ/ ಡಬ್ಲೂ.ಎಸ್. ಡಬ್ಲೂ/ ಎಂ.ಬಿ.ಎ/ ಕೃಷಿ ವಿಜ್ಞಾನ ಅಥವಾ ಸಮಾನ ಪದವಿ ಹೊಂದಿರಬೇಕು. 2) ಜಿಲ್ಲಾ ಎಂ.ಐ.ಎಸ್ ಸಹಾಯಕ ಕಮ್ ಡಿಇಓ (ಹುದ್ದೆ-1) ವಿದ್ಯಾರ್ಹತೆ: ಪದವಿ ಹೊಂದಿರಬೇಕು. 3) ತಾಲ್ಲೂಕು ಕಾರ್ಯಕ್ರಮ ನಿರ್ವಾಹಕ (ಹುದ್ದೆ-1), ವಿದ್ಯಾರ್ಹತೆ: ಪೂರ್ಣ ಸಮಯ ಸ್ನಾತಕೋತ್ತರ ಪದವಿ ಮತ್ತು ಪಿ.ಜಿ ಡಿಪ್ಲೋಮಾ ಹೊಂದಿರಬೇಕು. 4) ಕ್ಲಸ್ಟರ್ ಮೇಲ್ವಿಚಾರಕ (ಹುದ್ದೆ-5) ವಿದ್ಯಾರ್ಹತೆ: ಪದವಿ ಹೊಂದಿರಬೇಕು. 5). ಜಿಲ್ಲಾ ವ್ಯವಸ್ಥಾಪಕ ಜೀವನೋಪಾಯ (ಹುದ್ದೆ-1) ) ವಿದ್ಯಾರ್ಹತೆ: ಎಂಎಸ್ಸಿ ಕೃಷಿ ಅಥವಾ ಬಿಎಸ್ ಸಿ ಕೃಷಿ ಪದವಿ ಹೊಂದಿರಬೇಕು. 6) ಬ್ಲಾಕ್ ಮ್ಯಾನೇಜರ್ ಫಾರ್ಮ್ ಜೀವನೋಪಾಯ (ಹುದ್ದೆ-4) ವಿದ್ಯಾರ್ಹತೆ: ಎಂಎಸ್ಸಿ ಕೃಷಿ ಅಥವಾ ಬಿಎಸ್ ಸಿ ಕೃಷಿ ಪದವಿ ಹೊಂದಿರಬೇಕು. 7) ಬ್ಲಾಕ್ ಮ್ಯಾನೇಜರ್ ಕೃಷಿಯೇತರ ಜೀವನೋಪಾಯ (ಹುದ್ದೆ- 3) ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಹೊಂದಿರಬೇಕು. ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ (ಹುದ್ದೆ-1) ಪದವಿ ಹೊಂದಿರಬೇಕು
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಅಕ್ಟೋಬರ್ 31 ರೊಳಗೆ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ವೆಬ್ ಸೈಟ್ : https://jobsksrlps.karnataka.gov.in ಅನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಅಥವಾ ಸಂತೋಷ್ ಕುಮಾರ್ ರವರ ದೂರವಾಣಿ ಸಂಖ್ಯೆ 8884398469 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular