ಕೊಪ್ಪಳ: 2026-27ನೇ ಸಾಲಿನ ಮುದ್ರಾ ಯೋಜನೆಯಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನೇಕಾರರು ಹೊಸ ಮಗ್ಗ ಖರೀದಿಸಲು ಅಥವಾ ತಮ್ಮ ಉದ್ಯೋಗದ ಬಂಡವಾಳಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದು.
ಈ ಯೋಜನೆಯಡಿ ಪ್ರತಿ ಫಲಾನುಭವಿಗೆ 50,000 ರೂಪಾಯಿಗಳ ಸಾಲದ ಮಿತಿಯಿದ್ದು, ಅದರಲ್ಲಿ ಶೇ. 20 ರಷ್ಟು ಮಾರ್ಜಿನ್ ಮನಿ ಸೌಲಭ್ಯ ಸಿಗಲಿದೆ. ಆಸಕ್ತ ನೇಕಾರರು ಮೇ 20, 2026 ರೊಳಗಾಗಿ ಕೊಪ್ಪಳದ ಅಶೋಕ ಸರ್ಕಲ್ ಬಳಿ ಇರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08539-295469 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ. ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


