HomeKarnatakaರಾಜ್ಯ ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್‌ : ಮಾ. 9 ರಂದು ʻರೈತ ಸೌರಶಕ್ತಿ ಮೇಳʼ...

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್‌ : ಮಾ. 9 ರಂದು ʻರೈತ ಸೌರಶಕ್ತಿ ಮೇಳʼ ಆಯೋಜನೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆವರಣದಲ್ಲಿ ಮಾರ್ಚ್‌ 9, ಶನಿವಾರದಂದು ರೈತ ಸೌರಶಕ್ತಿ ಮೇಳ ಹಮ್ಮಿಕೊಳ್ಳಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಲು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಮಾರ್ಚ್‌ 9, ಶನಿವಾರದಂದು ರೈತ ಸೌರಶಕ್ತಿ ಮೇಳ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜೊತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ʼಕುಸುಮ್‌ ಸಿʼ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳ ಹೊಸ ಸಬ್‌ಸ್ಟೇಷನ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಆಸಕ್ತಿ ಇರುವ ರೈತರಿಗಾಗಿ ಆನ್‌ಲೈನ್‌ ಪೋರ್ಟಲ್‌ ವಿನ್ಯಾಸಗೊಳಿಸಲಾಗಿದೆ. ಮೇಳದಲ್ಲಿ ʼಸೌರ ಮಿತ್ರʼ ಆ್ಯಪ್ ಬಿಡುಗಡೆಯಾಗಲಿದ್ದು, ಈ ಆ್ಯಪ್‌ ಮೂಲಕ ರೈತರು ಅರ್ಜಿ ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತ ಸೌರಶಕ್ತಿ ಮೇಳದ ವಿಶೇಷತೆಗಳು

  • ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಬಳಕೆ ಕುರಿತು ಮಾಹಿತಿ
  • ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳ ಹೊಸ ಸಬ್‌ಸ್ಟೇಷನ್‌ಗಳಿಗೆ ಚಾಲನೆ
  • ಸೋಲಾ‌ರ್ ಪಂಪ್‌ಸೆಟ್ ಅಳವಡಿಸಲು ಅರ್ಜಿ ಸಲ್ಲಿಕೆಗೆ ನೂತನ ಆನ್‌ಲೈನ್ ಪೋರ್ಟಲ್, ‘ಸೌರ ಮಿತ್ರ ಆ್ಯಪ್’ಗೆ ಚಾಲನೆ

For Latest News Updates, Join Our Whatsapp Community🚩
RELATED ARTICLES

Most Popular