HomeLatest Newsರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಗುಡ್ ನ್ಯೂಸ್ : ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಗುಡ್ ನ್ಯೂಸ್ : ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2025 ರ ಮೇ, 02 ರಿಂದ 2026 ರ ಫೆಬ್ರವರಿ, 28 ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏಪ್ರಿಲ್, 28 ರ ಸಂಜೆ 5.30 ಗಂಟೆ ಕೊನೆಯ ದಿನವಾಗಿದೆ. ಅರ್ಜಿಯನ್ನು ಈ ಕಚೇರಿಯಿಂದ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿಯನ್ನು ಬೆಳಗ್ಗೆ: 10 ರಿಂದ ಸಂಜೆ 5.30 ರೊಳಗೆ ಸಂಪರ್ಕಿಸಬಹುದು ಅಥವಾ ಅಂತರ್ಜಾಲ https://horticulturedir.karnataka.gov.in ಇಲ್ಲಿ ಅರ್ಜಿ ಪಡೆಯಬಹುದು.

ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್ಎಸ್ಎಲ್ಸಿ ಅಂಕಪಟ್ಟಿ, ಭಾಪಾಕಾಗದ, ತಂದೆ/ ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಖಖಿಅ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ತಾಯಿಯವರ ಒಪ್ಪಿಗೆ ಪತ್ರ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿಗೆ ಖುದ್ದು ಸಲ್ಲಿಸತಕ್ಕದ್ದು ಎಂದು (ರಾಜ್ಯ ವಲಯ), ಮಡಿಕೇರಿ, ಕೊಡಗು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular