ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನಕ್ಕೆ ಒಂದು ಗಂಟೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದೆ. ದರ್ಶನದ ಸಮಯದಲ್ಲಿ ಅಲ್ಪ ಬದಲಾವಣೆಯಾಗಿದೆ.
ಈ ಹಿಂದೆ ಮಧ್ಯಾಹ್ನ 1:30 ರಿಂದ 3:30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಈಗ ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಮಾತ್ರ ಒಂದು ಗಂಟೆ ದರ್ಶನ ಬಂದ್ ಮಾಡಲಾಗುವುದು. ಹೀಗಾಗಿ ಭಕ್ತರಿಗೆ ದೇವರ ದರ್ಶನಕ್ಕೆ ಹೆಚ್ಚುವರಿ ಒಂದು ಗಂಟೆ ಒದಗಿಸಲಾಗಿದೆ.
ಬೆಳಗ್ಗೆ 6:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರವರೆಗೆ ದೇವರ ದರ್ಶನ ಇರಲಿದೆ. ಮಹಾ ಮಂಗಳಾರತಿ ಸಮಯದಲ್ಲಿ ಮಾತ್ರ ಈ ಹಿಂದಿನಂತೆ ಅಲ್ಪ ಕಾಲ ದೇವರ ದರ್ಶನ ಸ್ಥಗಿತಗೊಳಿಸಲಾಗುವುದು. ಮೇ 10 ರಿಂದಲೇ ಈ ವ್ಯವಸ್ಥೆ ಜಾರಿಯಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದ್ದಾರೆ.

