ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ.
ಶೇಕಡ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಶುದ್ಧ ಚಿನ್ನದ ದರ 600 ರೂ. ಇಳಿಕೆಯಾಗಿದ್ದು, 99.020 ರೂ.ಗೆ ಮಾರಾಟವಾಗಿದೆ. ಶೇಕಡ 99.5 ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ದರ 500 ರೂಪಾಯಿ ಕಡಿಮೆಯಾಗಿದ್ದು, 98,500 ರೂಪಾಯಿಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಒಂದು ಕೆಜಿಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದ್ದು, 1,04,800 ರೂಪಾಯಿಗೆ ಮಾರಾಟವಾಗಿದೆ.