ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ.) ರೆಪೊ ದರವನ್ನು ಕಡಿತ ಮಾಡಿದ ಬೆನ್ನಲ್ಲೇ ಕೆನರಾ ಬ್ಯಾಂಕ್ ಗ್ರಾಹಕರಿಗೆ ಲಾಭ ವರ್ಗಾಯಿಸಿದೆ. ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿದೆ.
ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿ ಶೇಕಡ 5.50 ರಿಂದ ಶೇಕಡ 5.25ಕ್ಕೆ ಇಳಿಸಿದೆ. ಕೆನರಾ ಬ್ಯಾಂಕ್ ತನ್ನ ಸಾಲಗಳ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ ಅನ್ನು ಶೇಕಡ 8.25 ರಿಂದ ಶೇಕಡ 8ಕ್ಕೆ ಕಡಿತಗೊಳಿಸಿದೆ. ಡಿಸೆಂಬರ್ 12 ರಿಂದಲೇ ಅನ್ವಯವಾಗುವಂತೆ ಬಡ್ಡಿ ದರ ಕಡಿತಗೊಳಿಸಲಾಗಿದೆ.
ಕೆನರಾ ಬ್ಯಾಂಕ್ ನ ಗ್ರಾಹಕರ ಸಾಲದ ಒಪ್ಪಂದದ ಆಧಾರದಲ್ಲಿ ಮೊತ್ತ ಕಡಿಮೆ ಆಗುವುದರ ಜೊತೆಗೆ ಸಾಲ ಮರುಪಾವತಿ ಅವಧಿ ಇಳಿಕೆಯಾಗಲಿದೆ. ಕೆನರಾ ಬ್ಯಾಂಕ್ ನ ತನ್ನ ಗ್ರಾಹಕರ ಕುರಿತಾದ ಬದ್ಧತೆ ಮತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇದು ತೋರಿಸುತ್ತದೆ ಎಂದು ತಿಳಿಸಲಾಗಿದೆ.

